ನ್ಯೂಸ್ ನಾಟೌಟ್: ಹುಲಿಗಳ ನಡುವಿನ ಕಾಳಗದಲ್ಲಿ 18 ತಿಂಗಳ ಮರಿ ಹುಲಿ ಸಾವನ್ನಪ್ಪಿದೆ.
ಈ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಹುಲಿಗಳ ನಡುವಿನಕಾಳಗದಲ್ಲಿ ಹೆಣ್ಣು ಹುಲಿ ಮರಿ ಮೃತಪಟ್ಟಿ ದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯ ವ್ಯಾ ಪ್ತಿಯ ಕಬಿಸಿ-ತರಿಕಿಹಳ್ಳ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾ ಗ ಹುಲಿ ಸತ್ತು ಬಿದ್ದಿ ರುವುದು ಕಂಡು ಬಂದಿದೆ. ಮೃತದೇಹದಲ್ಲಿ ಗಾಯಗಳ ಗುರುತು ಕಾಣಿಸಿಕೊಂಡಿದೆ. ಪಶು ವೈದ್ಯಾ ಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾ ರ ನಡೆಸಲಾಯಿತು.