ಕರಾವಳಿಕೊಡಗು

ಮಡಿಕೇರಿ:ಭೀಕರ ರಸ್ತೆ ಅಪಘಾತ,ತಾಯಿ-ಮಗ ಮೃತ್ಯು,ತಂದೆಗೆ ಗಾಯ

ನ್ಯೂಸ್ ನಾಟೌಟ್: ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ಕಾರಿನಲ್ಲಿದ್ದ ಬಲಮುರಿ ಗ್ರಾಮದ ಚೆಯ್ಯಂಡ ಕವಿತಾ(45) ಹಾಗೂ ಅವರ ಪುತ್ರ ಹತ್ತನೇ ತರಗತಿಯ ವಿದ್ಯಾರ್ಥಿ ಆರ್ಯನ್‌ (15) ಮೃತ ದುರ್ದೈವಿಗಳು.

ಮಂಡ್ಯದ ಗೆಜ್ಜಲಗೆರ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ.ಮೃತ ಕವಿತಾ ಅವರ ಪತಿ ಚೆಯ್ಯಂಡ ಕಟ್ಟಿ ಮುತ್ತಪ್ಪ ಅವರಿಗೆ ಗಾಯಗಳಾಗಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಮತ್ತು ಟಾಟಾ ಏಸ್‌ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಟ್ಟಿ ಮುತ್ತಪ್ಪ, ಕವಿತಾ ಹಾಗೂ ಆರ್ಯನ್‌ ಮಾ.23 ರಂದು ನಾಪೋಕ್ಲುವಿನಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಲ್ಲಿ ಪಾಲ್ಗೊಂಡು ಇಂದು ಕಾರಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇವರಿಗೆ ದೀಕ್ಷು ಹೆಸರಿನ ಪುತ್ರಿಯಿದ್ದು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Related posts

ವರದಿಗೆ ತಕ್ಷಣ ಸ್ಪಂದಿಸಿದ ಸಂಪಾಜೆ ಗ್ರಾಮ ಪಂಚಾಯತ್

ನ್ಯೂಸ್ ನಾಟೌಟ್ ವರದಿ ಮಾಡಿದ ಕೇವಲ 1 ಗಂಟೆಯಲ್ಲಿ ಬಾಲಕ ಪತ್ತೆ, ಬಾಲಕ ಸಿಕ್ಕಿದ್ದೆಲ್ಲಿ..?

ಕೊಡಗು: ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಮನವಿ, ಜಿಲ್ಲಾ ಕಾಂಗ್ರೆಸ್ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ