ಕೊಡಗುಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಡಿಕೇರಿ: 13 ವರ್ಷದ ಬಾಲಕನಿಂದ ಗರ್ಭವತಿಯಾದ ಅಪ್ರಾಪ್ತೆ..! ಮಗುವಿಗೆ ಜನ್ಮ ನೀಡಿದ ಬಳಿಕ ನವಜಾತ ಶಿಶುವನ್ನೇ ನಾಪತ್ತೆ ಮಾಡಿದಳೇ ತಾಯಿ..?

288

ನ್ಯೂಸ್ ನಾಟೌಟ್: 13 ವರ್ಷದ ಬಾಲಕನಿಂದ ಅಪ್ರಾಪ್ತೆಯೊಬ್ಬಳು ಗರ್ಭವತಿಯಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲಿನಿಂದ ವರದಿಯಾಗಿದೆ. ಅಕ್ಟೋಬರ್ 17ರಂದು ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ರಹಸ್ಯವಾಗಿ ಹೆರಿಗೆ ನಡೆದಿದೆ. ಹೆರಿಯಾಗಿ 4 ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿಲ್ಲ. ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹೆರಿಗೆ ನಂತರ ಚಿಕಿತ್ಸೆ ಇಲ್ಲದೆ ಬಾಲಕಿ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಹದಗೆಟ್ಟ ನಂತರ ಅಧಿಕಾರಿಗಳು ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ನವಜಾತ ಶಿಶು ಹುಡುಕದೆ ಅಧಿಕಾರಿಗಳು ಮತ್ತು ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾನು ಗರ್ಭಿಣಿಯಾಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಹೇಳಿದ್ದು, ಸದ್ಯ ಬಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಶಿಶುವಿನ ಡಿಎನ್​ಎ ಪರೀಕ್ಷೆಗೆ ಬಾಲಕನ ಪೋಷಕರು ಆಗ್ರಹಿಸಿದ್ದಾರೆ.

Click

https://newsnotout.com/2024/10/cab-driver-kannada-news-viral-news-romance-viral-notice/
See also  6 ನಿಮಿಷ ಶೌಚಾಲಯ ಬಳಸಿದ್ದಕ್ಕೆ 800 ರೂ. ಶುಲ್ಕ..! ಬಿಲ್ ನೋಡಿ ಮಹಿಳೆಗೆ ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget