Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

6 ನಿಮಿಷ ಶೌಚಾಲಯ ಬಳಸಿದ್ದಕ್ಕೆ 800 ರೂ. ಶುಲ್ಕ..! ಬಿಲ್ ನೋಡಿ ಮಹಿಳೆಗೆ ಶಾಕ್..!

417

ನ್ಯೂಸ್ ನಾಟೌಟ್: ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನದ ಬಳಿಯಿರುವ ಹೋಟೆಲ್‌ ನಲ್ಲಿ, ಕೇವಲ ಆರು ನಿಮಿಷಗಳ ಕಾಲ ನನ್ನ ತಾಯಿ ಶೌಚಾಲಯ ಬಳಸಿದ್ದಕ್ಕೆ ಹೊಟೇಲ್ 800 ರೂ. ಶುಲ್ಕ ವಿಧಿಸಿದೆ ಎಂದು ತಮಗಾದ ಕಹಿ ಅನುಭವವನ್ನು ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Megha upadhyay ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಮಹಿಳೆಯೊಬ್ಬರು ತಮಗಾದ ಕಹಿ ಅನುಭವವನ್ನು ವಿವರವಾಗಿ ಬರೆದುಕೊಂಡಿದ್ದಾರೆ. ಪೋಸ್ಟ್ ನಲ್ಲಿ, ” ನನ್ನ ತಾಯಿಯ ಆಸೆಯಂತೆ ರಾಜಸ್ಥಾನದ ಪ್ರಸಿದ್ಧ ದೇವಾಲಯಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆವು. ಅಲ್ಲಿ ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಿಂತಿರುಗುವಾಗ ದಾರಿಯ ಮಧ್ಯದಲ್ಲಿ ನನ್ನ ತಾಯಿ ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ವಾಕರಿಕೆ, ಹೊಟ್ಟೆ ನೋವು ಹಾಗೂ ವಾಂತಿ ಶುರುವಾಯಿತು. ಆ ವೇಳೆ ಅಲ್ಲಿಯೇ ಸುತ್ತ ಮುತ್ತಲೂ ಶೌಚಾಲಯಕ್ಕಾಗಿ ಹುಡುಕಿದೆವು. ಆದರೆ ಒಂದು ಶೌಚಾಲಯವು ಸ್ವಚ್ಛವಾಗಿರಲಿಲ್ಲ. ದೇವಸ್ಥಾನದ ಒಂದು ಕಿ.ಮೀ ಸುತ್ತಲಿನಲ್ಲಿ ಒಂದೇ ಒಂದು ಶೌಚಾಲಯವಿರಲಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿಗೆ ನಿಲ್ಲಲು ಸಾಧ್ಯವಾಗದಂತಾಗಿತ್ತು.”

“ಈ ವೇಳೆ ಅಲ್ಲೇ ಹತ್ತಿರದಲ್ಲಿದ್ದ ಹೋಟೆಲ್‌ ಗೆ ಹೋಗಿ ನಮಗೆ ರೂಮ್​​ ಬೇಡ, ಹತ್ತು ನಿಮಿಷಗಳ ಕಾಲ ಶೌಚಾಲಯ ಮಾತ್ರ ಅಗತ್ಯವಿದೆ ದಯವಿಟ್ಟು ಕೊಡಿ ಎಂದು ಕೇಳಿಕೊಂಡೆವು. ಆಕೆಯನ್ನು ನೋಡಿದ ಹೋಟೆಲ್ ಸಿಬ್ಬಂದಿಯೂ ಇದಕ್ಕೆ ಒಪ್ಪಿದರು. ಆ ಬಳಿಕ ಬಿಲ್ ಕೊಡಲು ಕೇಳಿದ್ದಕ್ಕೆ ನನ್ನ ಜೊತೆಗೆ ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರು. ನೂರು ರೂಪಾಯಿ ಕೊಡಿ ಎಂದರು. ಬಳಿಕ ಬಿಲ್ ಒತ್ತಾಯ ಮಾಡಿ ಕೇಳಿದ್ದಕ್ಕೆ, ಕೊನೆಗೆ ಬಿಲ್ ಕೊಟ್ಟರಾದರೂ, ಆರು ನಿಮಿಷಗಳ ಶೌಚಾಲಯ ಬಳಸಿದ್ದಕ್ಕೆ 800 ರೂ ಶುಲ್ಕ ವಿಧಿಸಿದ್ದನ್ನು ನೋಡಿ ಶಾಕ್ ಆಯಿತು. ಅದಲ್ಲದೇ ಈ ಹೋಟೆಲ್ ಸಿಬ್ಬಂದಿಗಳಲ್ಲಿ ಶುಲ್ಕ ಕಡಿಮೆ ಮಾಡಲು ಕೇಳಿಕೊಂಡರೂ ಮಾನವೀಯತೆ ತೋರಲೇ ಇಲ್ಲ. ಅಷ್ಟು ಮೊತ್ತವನ್ನು ಪಾವತಿಸುವಂತೆ ಹೇಳಿದರು. ಕೊನೆಗೆ ನನ್ನ ತಂದೆ 805 ರೂ. ಬಿಲ್​​ ಹಣ ಕಟ್ಟಿದರು, ಆ ಬಳಿಕ ಅಲ್ಲಿಂದ ಹೊರಟೆವು. ಆದರೆ, ಆರು ನಿಮಿಷಗಳ ಕಾಲ ಶೌಚಾಲಯ ಬಳಸಿದ್ದಕ್ಕಾಗಿ 805 ರೂ…! ನಾನು ಈ ಬಗ್ಗೆ ಸಹಾನುಭೂತಿಗಾಗಿ ಬರೆಯುತ್ತಿಲ್ಲ.” ಎಂದು ಬರೆದುಕೊಂಡಿದ್ದಾರೆ.

ಕೊಡಗು: ಪೊಲೀಸ್ ಶ್ವಾನ ಪೃಥ್ವಿಗೆ ಹೃದಯಾಘಾತ..! 500ಕ್ಕೂ ಹೆಚ್ಚು ವಿಐಪಿ, ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿದ್ದ ಶ್ವಾನ ಇನ್ನಿಲ್ಲ..!

ನಾಗಸಾಧುವಿನ ವೇಷದಲ್ಲಿ ಬಂದು ಕಾರು ಚಾಲಕನ ಚಿನ್ನದ ಉಂಗುರ ಕಸಿದು ಪರಾರಿ..! ಉಂಗುರ ಪಡೆಯಲು ಕಳ್ಳ ಮಾಡಿದ ಪ್ಲಾನ್ ಹೇಗಿತ್ತು..?

ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದು ನದಿಗೆ ಎಸೆದ ತಂದೆ..! ಸಿನಿಮೀಯ ರೀತಿಯಲ್ಲಿ ಬಯಲಾದ ಪ್ರಕರಣ..!

  Ad Widget   Ad Widget   Ad Widget   Ad Widget