ಕೊಡಗುಕ್ರೈಂ

ಮಡಿಕೇರಿ: ಬೈಕ್ ಶೋರೋಂನಲ್ಲಿ ಯುವಕನಿಗೆ ಕತ್ತರಿಯಿಂದ ಇರಿದು ಕೊಂದ ಪ್ರಕರಣ, ಇಬ್ಬರ ಬಂಧನ, ಘಟನೆ ನಡೆದಿದ್ದಾದರೂ ಏಕೆ..?

ನ್ಯೂಸ್ ನಾಟೌಟ್: ಬೈಕ್ ಶೋರೋಂ ನಲ್ಲಿ ಯುವಕನ ಚುಚ್ಚಿ ಕೊಂದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶೋರೂಂ ಮಾಲೀಕ ಶ್ರೀನಿಧಿ ಹಾಗೂ ಆತನ ಸ್ನೇಹಿತ ಅಲೀಂ ಎಂದು ಗುರುತಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಏನಿದು ಘಟನೆ? ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಸಾಜಿದ್ (22) ಮೃತಪಟ್ಟ ಯುವಕ. ದ್ವಿಚಕ್ರ ವಾಹನದ ಸರ್ವಿಸ್ ಗೆಂದು ಫೆ.5 ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಸಾಜಿದ್ ಕುಶಾಲನಗರದ ಶೋರೂಂ ಗೆ ತೆರಳಿದ್ದರು.

ಈ ವೇಳೆ ಶೋರೂಂ ಮಾಲೀಕ ಶ್ರೀನಿಧಿಯ ಕುರ್ಚಿಯಲ್ಲಿ ಸಾಜಿದ್ ಕುಳಿತ್ತಿದ್ದ ಎಂದು ತಿಳಿದು ಬಂದಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ಶ್ರೀನಿಧಿ ಕತ್ತರಿಯಿಂದ ಸಾಜಿದ್ ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ಸಾಜಿದ್ ನನ್ನು ಕುಶಾಲನಗರ ಆಸ್ಪತ್ರೆಯಿಂದ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇಂದು ಸಂಜೆ ಸಾಜಿದ್ ನ ಮೃತದೇಹವನ್ನು ಮಡಿಕೇರಿಯ ಗಣಪತಿ ಬೀದಿಯ ನಿವಾಸಕ್ಕೆ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನಗಳ ನಂತರ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತ ಯುವಕ ತಂದೆ ಶೌಕತ್, ತಾಯಿ ಉನೈಸ ಹಾಗೂ ಮೂವರು ಸಹೋದರರನ್ನು ಅಗಲಿದ್ದಾನೆ.

Related posts

ಸೌಜನ್ಯ ಹೋರಾಟಕ್ಕೆ ಕೈ ಜೋಡಿಸಿದ ಪ್ರಬಲ ಒಕ್ಕಲಿಗ ಮಠ..! ಬೆಳ್ತಂಗಡಿ ಪ್ರತಿಭಟನೆಯಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗಿ..! ಸೌಜನ್ಯ ಹೋರಾಟಕ್ಕೆ ಈಗ ಮತ್ತಷ್ಟು ಬಲ

ತನ್ನದೇ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಈತನ ನೀಚ ಕೃತ್ಯದ ಹಿಂದಿದೆಯ ನಿಗೂಢ ಕಾರಣ!

“ಸರ್ ಅನ್ಬೇಡ.. ಬಿಎಫ್ ಎನ್ನು”ವಂತೆ ವಿದ್ಯಾರ್ಥಿನಿಯನ್ನು ಪೀಡಿಸಿದ ಶಿಕ್ಷಕ! ಕಾಮುಕ ಶಿಕ್ಷಕನ ಆಡಿಯೋ, ಮೆಸಜ್ ವೈರಲ್!