ಕರಾವಳಿಕೊಡಗುಸುಳ್ಯ

ಮಡಿಕೇರಿ: ವರ್ತಕನ ಮೇಲೆ ಗುಂಡಿನ ದಾಳಿ

ನ್ಯೂಸ್ ನಾಟೌಟ್ : ಕೊಡಗಿನ ವಿರಾಜಪೇಟೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.ವರ್ತಕರೊಬ್ಬರ ಮೇಲೆ ಗುಂಡಿನ ದಾಳಿಯಾಗಿದ್ದು,ಅದೃಷ್ಟವಶಾತ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು,ವರ್ತಕ ಕೆ. ಬೋಪಣ್ಣ ಪಾರಾದವರು. ಆರೋಪಿ ಎನ್‌. ರಂಜನ್‌ ಚಿಣ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ರಂಜನ್‌ ಚಿಣ್ಣಪ್ಪ ಅವರ ಅಂಗಡಿಯಲ್ಲಿ 8 ವರ್ಷಗಳಿಂದ ಬೋಪಣ್ಣ ಅಡಿಕೆ ಖರೀದಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ತಿಳಿದು ಬಂದಿದೆ.ಇದೀಗ ರಂಜನ್‌ ಚಿಣ್ಣಪ್ಪ ಗುಂಡು ಹಾರಿಸಿದ್ದಾರೆ ಎಂದು ಆರೋಪವಿದ್ದು, ಆರೋಪಿ ಮತ್ತು ಸ್ಥಳದಲ್ಲೇ ಬಿದ್ದಿದ್ದ ರಿವಾಲ್ವರ್‌ ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಸುಳ್ಯ: ವಿದ್ಯಾರ್ಥಿನಿ ಅನಾರೋಗ್ಯದಿಂದ ಹಠಾತ್‌ ಕೊನೆಯುಸಿರು,ಆಗಿದ್ದೇನು?

ತೆಲುಗು ಚಿತ್ರ ನಟ  ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಬೆಳ್ತಂಗಡಿ/ಶಿಶಿಲ: ಪತ್ನಿಯ ಕಣ್ಣನ್ನೇ ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪಾಪಿ ಪತಿ..! ಮಗಳಿಗೂ ಗಾಯ,ಏನಿದು ಘಟನೆ?