ಕೊಡಗು

ಮಡಿಕೇರಿ:ಅಬಕಾರಿ ಕ್ಷಿಪ್ರ ಕಾರ್ಯಚರಣೆ,10 ಲೀ.ಕಳ್ಳಭಟ್ಟಿ ವಶ

ನ್ಯೂಸ್ ನಾಟೌಟ್ : ಮನೆಯಲ್ಲಿಯೇ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ವ್ಯಕ್ತಿಯನ್ನು ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ವರದಿಯಾಗಿದೆ.ಸೋಮವಾರಪೇಟೆ ತಾಲೂಕಿನ ಚನ್ನಪುರ ಗ್ರಾಮದ ನಿವಾಸಿ ಚಂದ್ರಶೇಖರ್ (ನಂಜುಂಡಶೆಟ್ಟಿ) ಬಂಧಿತ ವ್ಯಕ್ತಿ.

ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಹೊಂದಿದ್ದ 300 ಲೀ.ಬೆಲ್ಲದ ಪೊಳಗಂಜಿ ಮತ್ತು ಪರಿಕರಗಳು ಸೇರಿದಂತೆ 10 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿ ಕ್ರಮಕೈಗೊಂಡು ಪ್ರಕರಣ ದಾಖಲಿಸಿಕೊಂಡರು.ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆರ್.ಎಂ.ಚೈತ್ರಾ, ಅಬಕಾರಿ ಪೇದೆಗಳಾದ ಎ.ಪಿ.ವೀರೇಶ್ ಕುಮಾರ್, ಮಹಾದೇವ ಗಡ್ಡಿ ಹಾಗೂ ಕಾಂತರಾಜ್ ಪಾಲ್ಗೊಂಡಿದ್ದರು.

Related posts

ಮಡಿಕೇರಿ:ವಿವಾಹಿತನಿಗೆ ಅಕ್ರಮ ಸಂಬಂಧದಿಂದ ಮಗು ಜನನ..! ಹುಟ್ಟುತ್ತಲೇ ಕುತ್ತಿಗೆ ಹಿಸುಕಿ ಕೊಂದು ಗದ್ದೆಯಲ್ಲಿ ಹೂತಿಟ್ಟ..!ಏನಿದು ಮನಕಲಕುವ ಘಟನೆ?

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಮಡಿಕೇರಿ: ಮರಣ ಬಾವಿ ಪ್ರದರ್ಶನ ವೇಳೆ ರುಯ್..ರುಯ್ ತಿರುಗುತ್ತಲೇ ಕಾರುಗಳು ಪಲ್ಟಿ..! ಮುಂದೇನಾಯ್ತು ..?