ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ ದಸರಾ: ದಶಮಂಟಪಗಳ ಶೋಭಯಾತ್ರೆ ವೇಳೆ ಮಗುಚಿ ಬಿದ್ದ ಟ್ರಾಕ್ಟರ್..! ಈ ಬಗ್ಗೆ ದೇಗುಲದ ಸದಸ್ಯರು ಹೇಳಿದ್ದೇನು? ಮುಂದೇನಾಯ್ತು..?

ನ್ಯೂಸ್ ನಾಟೌಟ್: ಮಡಿಕೇರಿ ದಸರಾ (Mdikeri Dasara) ದಶಮಂಟಪಗಳ ಶೋಭಯಾತ್ರೆ ವೇಳೆ ಮಂಟಪವೊಂದರ ಟ್ರಾಕ್ಟರ್ (Tractor) ಮಗುಚಿ ಬಿದ್ದಿದ್ದು, ಮೂವರು ಗಾ* ಯಗೊಂಡ ಘಟನೆ ಅ.25 ಮುಂಜಾನೆ ೩.೩೦ ಸುಮಾರಿಗೆ ನಡೆದಿದೆ.

ಶೋಭಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ ಜಾವ 3:30ರ ವೇಳೆ ಮಗುಚಿದೆ.

ಇದರಿಂದ ಮೂವರಿಗೆ ಗಾ* ಯಗಳಾಗಿವೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡುವಂತಾಗಿತ್ತು.

ದೇಗುಲದ ಸಮೀಪ ಹಾಗೂ ಮೆರವಣಿಗೆಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ ಜಾವ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮಗುಚಿದೆ ಎಂದು ದೇಗುಲದ ಸದಸ್ಯರು ತಿಳಿಸಿದ್ದಾರೆ.

Related posts

ಜಿಂದಾಲ್ ಕಾರ್ಖಾನೆಯಲ್ಲಿ ಭಾರೀ ದುರಂತ..! ನೀರಿನ ಹೊಂಡದಲ್ಲಿ ಬಿದ್ದು ಮೂರು ಕಾರ್ಮಿಕರು ಸಾವು..!

ಸುಳ್ಯದ ಕಾಲೇಜು ಹುಡುಗನ ಮೇಲೆ ಆನೆ ದಾಳಿ

ಮಹಿಳೆ ಮೆದುಳಿನಿಂದ ಜೀವಂತ ಹುಳು ಹೊರತೆಗೆದ ವೈದ್ಯರು..! ಆ ಹುಳು ಮಹಿಳೆಯ ಮೆದುಳು ಪ್ರವೇಶಿಸಿದ್ದು ಹೇಗೆ? ಏನಿದು ವೈದ್ಯಲೋಕವೇ ಅಚ್ಚರಿ ಪಟ್ಟ ಪ್ರಕರಣ?