ಕೊಡಗು

ಮಡಿಕೇರಿ: ಮೇಯಲು ಕಟ್ಟಿ ಹಾಕಿದ್ದ 5 ಹಸುಗಳು ವಿದ್ಯುತ್ ಸ್ಪರ್ಶಿಸಿ ದಾರುಣ ಸಾವು, ಒಂದು ವೈರ್ ಹಿಂದಿದ್ದ ಅಪಾಯ..!

ನ್ಯೂಸ್ ನಾಟೌಟ್: ಮೇಯಲು ಕಟ್ಟಿ ಹಾಕಿದ್ದ 5 ಹಸುಗಳು ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ನಡೆದಿದೆ.

ಮತ್ತೂರು ಗ್ರಾಮದ ಆಲೆಮಾಡ ನಾಣಯ್ಯ ಎಂಬುವವರಿಗೆ ಸೇರಿದ ಹಸುಗಳು ಎಂದು ತಿಳಿದು ಬಂದಿದೆ. ಪಾಳು ಬಿದ್ದ ಶ್ರೀನಿವಾಸ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ಹಸುಗಳನ್ನು ಮೇಯಲು ಇಂದು ಬೆಳಗ್ಗೆ ಕಟ್ಟಿ ಹಾಕಲಾಗಿತ್ತು. ಸಂಜೆ ವೇಳೆ ಹಸುವನ್ನು ವಾಪಸ್ ಕರೆದುಕೊಂಡು ಬರಲು ಬಂದಾಗ ಹಸುಗಳೆಲ್ಲ ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ. ಕರೆಂಟ್ ವಯರ್ ಬಿದ್ದು ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಇದೀಗ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಡಿಕೇರಿ :ಮಳೆಗಾಲದ ಚುಮು ಚುಮು ಚಳಿಗೆ ಬಟ್ಟೆ ಒಣಗಿಸುವುದೇ ಸವಾಲು..ಕೊಡಗಿನ ಜನತೆ ಬಟ್ಟೆ ಒಣಗಿಸಲು ಬಳಂಜಿ,ಅಗ್ಗಿಷ್ಟಿಕೆ,ಏಡಿಗಳಿಗೆ ಮೊರೆ ಹೋಗೊದ್ಯಾಕೆ?

ಕುಶಾಲನಗರ: ಆಹಾರ ಅರಸಿ ಬಂದ ಕಾಡಾನೆಗೆ ಗುಂಡಿಕ್ಕಿದ ದುಷ್ಕರ್ಮಿಗಳು..!

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು:ನಾಲ್ಕು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಜೋಡಿ