ಕರಾವಳಿಕೊಡಗು

ಮಡಿಕೇರಿ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..! ತಾಯಿ-ಮಗು ಆರೋಗ್ಯ..

ನ್ಯೂಸ್‌ ನಾಟೌಟ್‌ :ತಡರಾತ್ರಿ ಮಹಿಳೆಯೊಬ್ಬರು ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಮಡಿಕೇರಿ ಸಮೀಪದಸೋಮವಾರ ಪೇಟೆಯ ಅಬ್ಬೂರುಕಟ್ಟೆ ಎಂಬಲ್ಲಿಂದ ವರದಿಯಾಗಿದೆ.ಗಿರಿಜನ ಹಾಡಿಯ ನಿವಾಸಿ ಬೇಬಿ ಎಂಬುವವರು   ಆಂಬುಲನ್ಸ್‌ನಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.

ಹೊಟ್ಟೆ ನೋವು ಕಾಣಿಸಿಕೊಂಡಿತ್ತೆಂದು ಮಹಿಳೆಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಹೆರಿಗೆ ನೋವು ತೀವ್ರಗೊಂಡಿದೆ.ಇದೇ ವೇಳೆ ಸ್ಟಾಫ್ ನರ್ಸ್ ಮಮತಾ ಸ್ವಾಭಾವಿಕ ಹೆರಿಗೆ ಮಾಡಿಸಿದ್ದಾರೆ.ಚಾಲಕ ಅರುಣ್ ಕುಮಾರ್ ನೆರವಾಗಿದ್ದರು. ಇದೀಗ ತಾಯಿ,ಮಗು ಸುರಕ್ಷಿತವಾಗಿದ್ದು ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಪಂಜ ಜಾತ್ರೆಗೆ ಭರದ ಸಿದ್ಧತೆ :ಪಂಜ ಪೇಟೆಯಲ್ಲಿ ದೇವಳದ ಕಾಣಿಕೆ ಹುಂಡಿ ಲೋಕಾರ್ಪಣೆ

ಪುತ್ತೂರು: ಹಿಂದೂಗಳ ಭಾವನೆಗೆ ಧಕ್ಕೆ ತರುವ ಗೋ ಹತ್ಯೆಗೆ ಅವಕಾಶ ನೀಡಬಾರದು, ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಪೊಲೀಸರಿಗೆ ಮನವಿ

ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಕಳದ ಅಭಿವೃದ್ಧಿ ಇಡೀ ರಾಜ್ಯಕ್ಕೆ ಮಾದರಿ..!