Latestಕ್ರೈಂವೈರಲ್ ನ್ಯೂಸ್ಸಿನಿಮಾ

ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್..! ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಪರಪ್ಪನ ಅಗ್ರಹಾರಕ್ಕೆ ..!

564

ನ್ಯೂಸ್ ನಾಟೌಟ್: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುವನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪಗಳ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕೆಲ ದಿನಗಳ ಹಿಂದಷ್ಟೆ ಮಡೆನೂರು ಮನುವನ್ನು ಬಂಧಿಸಿದ್ದರು. ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತ್ತು. ಎರಡು ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಇತ್ಯಾದಿಗಳ ಬಳಿಕ ಇಂದು (ಮೇ 26) ಪೊಲೀಸರು ಮಡೆನೂರು ಮನುವನ್ನು 3ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲವು 14 ದಿನಗಳ ಕಾಲ ಮಡೆನೂರು ಮನುಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮನುವಿನ ಸಹನಟಿಯಾಗಿದ್ದ ಯುವತಿಯೊಬ್ಬರು ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಅತ್ಯಾಚಾರ ಮಾತ್ರವೇ ಅಲ್ಲದೆ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಬೆದರಿಕೆಗಳನ್ನು ಸಹ ಮನು ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೇ ಯುವತಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೆ ಮಡೆನೂರು ಮನುವನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರ ವಶದಲ್ಲಿದ್ದ ಮನುವಿನ ವಿಚಾರಣೆ ನಡೆಸಿ ಮನು ಇದ್ದ ಮನೆ, ಸಂತ್ರಸ್ತೆ ಇದ್ದ ಮನೆ, ಕೆಲ ರೆಸಾರ್ಟ್​ಗಳು ಇತ್ಯಾದಿಗಳ ಕಡೆ ಕರೆದೊಯ್ದು ಸ್ಥಳ ಮಹಜರನ್ನು ಪೊಲೀಸರು ಕಳೆದ ಎರಡು ದಿನಗಳಲ್ಲಿ ಮಾಡಿದ್ದರು. ತನಿಖೆ ಮುಗಿದ ಬಳಿಕ ಇಂದು (ಮೇ 26) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆಗೆ ಮನುವಿನ ಅಗತ್ಯ ಇಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು. ಅದರಂತೆ ಮನುಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕೊಡಗಿನಲ್ಲಿ ಮಹಾವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಹಾಗೂ ಸಂಯೋಜಿತ ಕಾಲೇಜುಗಳಿಗೆ 2 ದಿನ ರಜೆ ಘೋಷಣೆ, ಕೊಡಗು ವಿವಿ ಕುಲಪತಿ ಆದೇಶ

See also  ಅಮೆರಿಕದ ದೇಗುಲದಲ್ಲಿ ಮೋದಿ ಹೆಸರಲ್ಲಿ ಪೂಜೆ ಮಾಡಿಸಿದ ಅಣ್ಣಾಮಲೈ..! ಅಮೆರಿಕದಲ್ಲಿರುವ ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ಮಂದಿರಕ್ಕೆ ಭೇಟಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget