ನ್ಯೂಸ್ ನಾಟೌಟ್: ಅಮೆರಿಕ ಪ್ರವಾಸದಲ್ಲಿರುವ ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅಮೆರಿಕ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪೂಜೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಶಿ, ನಕ್ಷತ್ರಗಳನ್ನು ಹೇಳಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಹಲ್ಗಾಮ್ ದಾಳಿಯ ನಂತರ ದೇಶದ ಸೈನ್ಯಕ್ಕೆ ಶಕ್ತಿ ತುಂಬಲು ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ. ಅಮೆರಿಕಾದ ಫೀನಿಕ್ಸ್ ಮಹಾನಗರದಲ್ಲಿರುವ ಕೃಷ್ಣಮಂದಿರದಲ್ಲಿ ಅಣ್ಣಾಮಲೈ ಪೂಜೆ ಸಲ್ಲಿಸಿದ್ದಾರೆ.
Shri K Annamalai performed archana seva in the name of Hon’ble @PMOIndia Shri @narendramodi -ji & prayed to Sri Srinivasa Devaru for the well being of 140+ Cr Indians during his visit. https://t.co/QEcV7LBafQ pic.twitter.com/UURPgTZyTw
— SriPuthigeMatha (@PuthigeSri) April 28, 2025
ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಅಣ್ಣಾಮಲೈ ಈ ವೇಳೆ ಕಾರ್ಯಕ್ರಮ ಸಂಯೋಜಕರ ಬಳಿ ಮಾಹಿತಿ ಪಡೆದು ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ಮಂದಿರ ಅಮೆರಿಕದಲ್ಲಿದೆ.
ಮೊಮ್ಮಗನೊಂದಿಗೆ ಓಡಿ ಹೋದ 4 ಮಕ್ಕಳ ತಾಯಿ..! ಇಲ್ಲಿದೆ ವಿಚಿತ್ರ ಘಟನೆ..!