ಕೊಡಗು

ಮೆದೆನಾಡಿನಲ್ಲಿ ಭಾರಿ ಸದ್ದಿನೊಂದಿಗೆ ಕುಸಿದ ಬೆಟ್ಟ..!

ನ್ಯೂಸ್ ನಾಟೌಟ್: ಕೊಡಗಿನ ರಾಮಕೊಲ್ಲಿಯಲ್ಲಿ ಜಲಸ್ಫೋಟ, ೨ನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೇ ನಿನ್ನೆ ತಡರಾತ್ರಿ (೨೧-೦೭-೨೦೨೨) ೨.೩೦ಕ್ಕೆ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಮಾತ್ರವಲ್ಲ ಬೆಟ್ಟ ಜರಿದು ಬಿದ್ದಿದೆ. ಸದ್ಯ ಬೆಟ್ಟದ ಒಂದು ಬಾಗದ ಸಂಪೂರ್ಣ ಮಣ್ಣು ನೀರಿನೊಂದಿಗೆ ಜರಿದುಕೊಂಡು ಮದೆನಾಡಿನ ಮೂಲಕ ಜೋಡುಪಾಲದವರೆಗೆ ಕೆಸರು ಮಿಶ್ರಿತ ನೀರು ಹರಿದುಕೊಂಡು ಬಂದಿದೆ.

ಸದ್ಯ ಅಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆ ಭಾಗದಲ್ಲಿ ಮನೆಗಳಿಲ್ಲ. ಕೆಳಗಡೆ ಭಾಗದಲ್ಲಿ ಇರುವ ೧೫ ಮನೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಏನೂ ಅಪಾಯವಿಲ್ಲ. ಆದರೆ ಜೋರಾಗಿ ಮಳೆ ಸುರಿದ ಪಕ್ಷದಲ್ಲಿ ಬೆಟ್ಟ ಇನ್ನಷ್ಟು ಕುಸಿಯಬಹುದು. ಮಾತ್ರವಲ್ಲ ಹಾಗೆ ಕುಸಿದು ಬಂದ ಮಣ್ಣು ಅದು ಜೋಡುಪಾಲದ ತನಕ ಬಂದು ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ೨೦೧೮ರಲ್ಲೇ ಈ ಬೆಟ್ಟ ಜರಿದ ಪರಿಣಾಮ ಜೋಡುಪಾಲದಲ್ಲಿ ಸಾಕಷ್ಟು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬೆಟ್ಟ ಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಆದರೆ ಇದು ಎಲ್ಲಿಂದು ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇಂದು ಸ್ಥಳೀಯ ಆಡಳಿತಾಧಿಕಾರಿಗಳು ಬೆಟ್ಟವನ್ನು ವೀಕ್ಷಿಸುವ ಪ್ರಯತ್ನ ನಡೆಸಿದರಾದರೂ ಕೆಸರು ಹಾಗೂ ಬೆಟ್ಟ ಕುಸಿಯಬಹುದಾದ ಆತಂಕದಿಂದ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲಿಗೆ ತೆರಳುವುದು ಇನ್ನಷ್ಟು ಕಷ್ಟದ ವಿಚಾರ ಅನ್ನುವುದನ್ನು ನ್ಯೂಸ್ ನಾಟೌಟ್ ಗೆ ಮದೆ ಗ್ರಾಮದ ವಿಎ ರಮೇಶ್ ತಿಳಿಸಿದ್ದಾರೆ.   

Related posts

ಫೆಬ್ರವರಿಯಲ್ಲಿ ವಿಜಯ್‌ ದೇವರಕೊಂಡ , ರಶ್ಮಿಕಾ ಜತೆ ನಿಶ್ಚಿತಾರ್ಥ..!ಕೊನೆಗೂ ಮೌನ ಮುರಿದು ನಟ ಹೇಳಿದ್ದೇನು?

ಕೊಡಗಿನಲ್ಲಿ ಸಿಡಿಲು ಗುಡುಗಿನೊಂದಿಗೆ ವರುಣನ ಆರ್ಭಟ,ಸಿಡಿಲು ಬಡಿದು 15 ನಿಮಿಷಗಳ ಕಾಲ ಹೊತ್ತಿ ಉರಿದ ತೆಂಗಿನ ಮರ

ಮಡಿಕೇರಿ: ಓರ್ವನ ಬಲಿ ಪಡೆದಿದ್ದ ಪುಂಡ ಕಾಡಾನೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು, 16 ವರ್ಷದ ಗಂಡು ಆನೆ ಸೆರೆ ಸಿಕ್ಕಿದ್ದು ಹೇಗೆ..?