ಕ್ರೈಂವೈರಲ್ ನ್ಯೂಸ್

ಪ್ರೇಮಿಗಳು ಪರಾರಿಯಾದದ್ದೇಗೆ..? ಯುವತಿಯ ಕಡೆಯರು ಆತನ ತಂದೆಗೆ ಥಳಿಸಿದ್ಯಾಕೆ..? ಏನಿದು ಅಮಾನವೀಯ ಘಟನೆ?

ನ್ಯೂಸ್ ನಾಟೌಟ್ : ಬೆಳಗಾವಿಯಲ್ಲಿ (Belagavi) ಪ್ರೇಮಿಗಳು (Lovers) ಪರಾರಿಯಾದ ಹಿನ್ನೆಲೆ ಯುವತಿಯ ಕಡೆಯವರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂದೆಯ (Father) ಶರ್ಟ್ ಕಾಲರ್ ಹಿಡಿದು ಎಳೆದು ತಂದು ನೆಲಕ್ಕೆ ಕೆಡವಿ ಥಳಿಸಿದ ಅಮಾನವೀಯ ಘಟನೆ ಡಿ.19 ರಂದು ನಡೆದಿದೆ.

ಬೆಳಗಾವಿ ಮಹಾನಗರದಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾದೆ ಎನ್ನಲಾಗಿದೆ.
ಯವತಿಯನ್ನು ತಮಗೆ ಒಪ್ಪಿಸುವಂತೆ ಆಗ್ರಹಿಸಿ ಮೂವರು ಮಹಿಳೆಯರು ಸೇರಿದಂತೆ 8 ಜನರಿಂದ ಯುವಕನ ತಂದೆಗೆ ಜೀವ ಬೆದರಿಕೆಯೊಡ್ಡಿದ್ದು, ಮೊಬೈಲ್ ಕಸಿದುಕೊಂಡು ಹಲ್ಲೆ (Assault) ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ಯುವಕನ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವತ್ತರಾದ ಬೆಳಗಾವಿ ನಗರ ಪೊಲೀಸರು 8 ಜನರನ್ನು ಬಂಧಿಸಿ ಯುವಕನ ತಂದೆಗೆ ರಕ್ಷಣೆ ನೀಡಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.

Related posts

ಏನಿದು ಸರ್ಕಾರಿ ಶಾಲಾ ಮಕ್ಕಳಿಗೆ ಚಪ್ಪಲಿ ಭಾಗ್ಯ..? ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು ಮೂಲದ ಈ ಸ್ಟಾರ್ ನಟಿಗೆ ನಟನ ಪುತ್ರನಿಂದ ಟಾರ್ಚರ್..! ಶೂಟಿಂಗ್ ಬಿಟ್ಟು ಬಾ ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದದ್ಯಾರು?

ಅನಾರೋಗ್ಯದಿಂದ ಕುಸಿದು ಬಿದ್ದ ಬಿಎಂಟಿಸಿ ಡ್ರೈವರ್..! ಚಾಲಕನನ್ನು ಆಸ್ಪತ್ರೆಗೆ ಸೇರಿಸಿ, ಬಸ್ ಚಲಾಯಿಸಿದ ಎಸಿಪಿ! ಇಲ್ಲಿದೆ ವೈರಲ್ ವಿಡಿಯೋ