ಕರಾವಳಿದೇಶ-ಪ್ರಪಂಚ

ಆಂಧ್ರಪ್ರದೇಶದಲ್ಲಿ ಲಾರಿಗಳ ನಡುವೆ ಭೀಕರ ಅಪಘಾತ, ಉಚ್ಚಿಲ ಭಾಸ್ಕರನಗರದ ನಿವಾಸಿ ಸಾವು

ನ್ಯೂಸ್‌ ನಾಟೌಟ್‌: ಆಂಧ್ರಪ್ರದೇಶದ ನಂಬೂರು ಎಂಬಲ್ಲಿ ಗುರುವಾರ ಮೀನು ಸಾಗಾಟದ ಲಾರಿ ಮತ್ತು ಇನ್ನೊಂದು ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಪಡುಬಿದ್ರಿಯ ಸಮೀಪದ ಉಚ್ಚಿಲ ಭಾಸ್ಕರನಗರದ ನಿವಾಸಿ ಬಷೀರ್ ಎಂಬವರು ಮೃತಪಟ್ಟ ಘಟನೆ ನಡೆದಿದೆ.

ಮೀನಿನ ಲಾರಿಯಲ್ಲಿ ಚಾಲಕನಾಗಿದ್ದ ಬಷೀರ್, ಗುರುವಾರ ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಲಾರಿಯೊಂದಕ್ಕೆ ಡಿಕ್ಕಿ ಹೊಡಿದಿದೆ. ಅಪಘಾತದಲ್ಲಿ ಬಷೀರ್ ಮೃತಪಟ್ಟಿದ್ದು, ಜತೆಗೆ ಡಿಕ್ಕಿಯಾದ ಮತ್ತೊಂದು ಲಾರಿಯ ಚಾಲಕ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಗೋವಾ ಮೂಲದ ಮೀನಿನ ಲಾರಿಯಲ್ಲಿ ಚಾಲಕನಾಗಿರುವ ಬಷೀರ್, ಓರ್ವ ಉತ್ತಮ ಕ್ರಿಕೆಟಿಗನಾಗಿಯೂ ಹೆಸರುಗಳಿಸಿದ್ದರು. ಮೀನು ಸಾಗಾಟಕ್ಕಾಗಿ ಮಂಗಳವಾರ ಚೆನ್ನೈಗೆ ತೆರಳಿದ್ದ ಬಷೀರ್, ಅಲ್ಲಿ ಲಾರಿಯಲ್ಲಿ ಮೀನು ತುಂಬಿಸಿಕೊಂಡು ಒಡಿಶಾಕ್ಕೆ ತೆರಳುತ್ತಿದ್ದರು. ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಉಚ್ಚಿಲ ಭಾಸ್ಕರನಗರದ ಶಾಬುದ್ದೀನ್- ನಬಿಸಾ ಪುತ್ರನಾಗಿರುವ ಬಷೀರ್, ಬೆಳಪುವಿನಲ್ಲಿ ಮನೆಮಾಡಿಕೊಂಡಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು, ಅವರ ಮೃತದೇಹವನ್ನು ಹುಟ್ಟೂರು ಉಚ್ಚಿಲಕ್ಕೆ ತರಲು ಅವರ ಸಹೋದರರು ಹಾಗೂ ಗೆಳೆಯರು ಆಂಧ್ರಪ್ರದೇಶಕ್ಕೆ ಹೊರಟಿದ್ದಾರೆ. ಮೃತದೇಹ ತರಲು ಒಂದೆರೆಡು ದಿನ ಬೇಕಾಗಿದ್ದು, ಅವರ ಅಗಲಿಕೆಯಿಂದ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

Related posts

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಮಸಿದಿಗೆ ಅಡಿಪಾಯ ಹಾಕ್ತಾರಾ? ಇಂಡಿಯನ್ ಮುಸ್ಲಿಂ ಲೀಗ್ ಪ್ರಧಾನಿ ಬಳಿ ವಿನಂತಿಸಿಕೊಂಡದ್ದೇನು?

ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಮತ್ತೆ 14 ದಿನ ಜೈಲು..! ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಗಳು ಕೋರ್ಟ್ ಗೆ ಹಾಜರು..!

ಇಂದು ಶೂನ್ಯ ನೆರಳಿನ ದಿನ! ಏನಿದು ಶೂನ್ಯ ನೆರಳಿನ ದಿನ? ಎಷ್ಟು ಗಂಟೆಗೆ ಈ ಕೌತುಕದ ವಿಧ್ಯಮಾನ ಸಂಭವಿಸಲಿದೆ?