ದೇಶ-ಪ್ರಪಂಚ

ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ;ಕರ್ನಾಟಕದ 8‌ ಮಂದಿಗೆ ಟಿಕೆಟ್‌..!

ನ್ಯೂಸ್‌ ನಾಟೌಟ್‌ :  ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಪ್ರತಿ ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಈಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎಲ್ಲೆಡೆ ಚಾಲನೆ ಸಿಕ್ಕಿದ್ದು, ಈ ನಿಟ್ಟಿನಲ್ಲಿ ನವ ದೆಹಲಿಯಲ್ಲಿ ಸಭೆ ನಡೆಸುತ್ತಿರುವ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ಕರ್ನಾಟಕದ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಮೊನ್ನೆ ಮೊನ್ನೆಯಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಹೋಗಿರುವ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಅನ್ನು ನೀಡಲಾಗಿದೆ.ಇನ್ನು ಗೀತಾ ಶಿವರಾಜ್‌ಕುಮಾರ್‌ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

ಕರ್ನಾಟಕದ (Congress Karnataka) 14 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿ 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ಒಟ್ಟು 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಎಂಟು ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು

  1. ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ – ಬಂಟ್ಸ್
  2. ಚಿತ್ರದುರ್ಗ – ಬಿ.ಎನ್ ಚಂದ್ರಪ್ಪ – ಎಸ್.ಸಿ
  3. ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ
  4. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ
  5. ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ
  6. ವಿಜಯಪುರ – ರಾಜು ಆಲಗೂರು – ಎಸ್.ಸಿ
  7. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ
  8. ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್ – ಒಕ್ಕಲಿಗ

Related posts

ಮದುವೆಗೆ ನಿರಾರಿಸಿದ ಹುಡುಗಿ, ಮನನೊಂದು ಯುವಕ ಆತ್ಮಹತ್ಯೆ..! ನಾನು ಒಬ್ಬ ಹುಚ್ಚು ಪ್ರೇಮಿ ಎಂದು ವಾಟ್ಸಪ್‌ ನಲ್ಲಿ ಸ್ಟೇಟಸ್ ಹಾಕಿ ನೇಣಿಗೆ ಶರಣು..!

ಆನ್‌ಲೈನ್‌ ಆರ್ಡರ್‌ ಮಾಡಿದ ವಸ್ತು ತಲುಪಿಸಲು ಬರೋಬ್ಬರಿ ನಾಲ್ಕು ವರ್ಷ ತೆಗೆದುಕೊಂಡ ಸಂಸ್ಥೆ..! ಏನಿದು ದೆಹಲಿಯ ಟೆಕ್ಕಿಯ ಸಮಸ್ಯೆ ?

ಡ್ರೋನ್ ಮೂಲಕ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ..! ಇಲ್ಲಿದೆ ವಿಡಿಯೋ