Uncategorized

ಸೈನಿಕನ ಸಮವಸ್ತ್ರದಲ್ಲೇ ಸಿನಿಮಾದಲ್ಲಿ ಲಿಪ್​​ಲಾಕ್; ಯೋಧರಿಗೆ ಅವಮಾನ;ದೀಪಿಕಾ-ಹೃತಿಕ್‌ಗೆ ಲೀಗಲ್​ ನೋಟಿಸ್​..!

ನ್ಯೂಸ್‌ ನಾಟೌಟ್‌ : ಕೆಲವೊಮ್ಮೆ ಯಾವುದೇ ಕೆಲಸ ಮಾಡೋ ಮುಂಚೆ ನೂರು ಬಾರಿ ಯೋಚನೆ ಮಾಡಬೇಕಾಗುತ್ತೆ.ಬೇರೆ ಬೇರೆ ಕೋನಗಳಲ್ಲಿ ಯೋಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತೆ.ಹೌದು, ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಕಳೆದ ಜನವರಿ 25, 2024ರಂದು ರಿಲೀಸ್​ ಆಗಿರೋದ್ರ ಬಗ್ಗೆ ನಿಮ್ಗೆ ಗೊತ್ತಿದೆ.ಇದೀಗ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅನಿಲ್ ಕಪೂರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಫೈಟರ್’ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಾಯುಪಡೆ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಇಬ್ಬರೂ ವಾಯುಪಡೆ ಅಧಿಕಾರಿಗಳಾಗಿರುತ್ತಾರೆ. ಇಬ್ಬರ ರೊಮ್ಯಾಂಟಿಕ್ ದೃಶ್ಯಗಳೂ ಇವೆ. ಆದರೆ ವಾಯುಪಡೆ ದಿರಿಸಿನಲ್ಲಿ ಚುಂಬನ, ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದಕ್ಕೆ ದೀಪಿಕಾ ಮತ್ತು ಹೃತಿಕ್ ಇಬ್ಬರಿಗೂ ವಾಯುಪಡೆ ಲೀಗಲ್ ನೋಟಿಸ್‌ ನೀಡಿದೆ.

ವಾಯುಪಡೆಗೆ ಅದರದ್ದೇ ಆದ ಗೌರವವಿದೆ. ಅದರ ಸಮವಸ್ತ್ರ ತ್ಯಾಗ, ಶಿಸ್ತು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಬದ್ಧತೆಯ ಪ್ರತೀಕವಾಗಿದೆ. ಆದರೆ ಸಿನಿಮಾದಲ್ಲಿ ಈ ಸಮವಸ್ತ್ರ ಧರಿಸಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಭಾಗಿಯಾಗಿದ್ದು ವಾಯುಪಡೆಯ ಘನತೆಗೆ ಧಕ್ಕೆ ತಂದಂತೆ. ಇಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಿ ವಾಯುಪಡೆಗೆ ಅವಮಾನ ಮಾಡಲಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯಾತ ಅಧಿಕಾರಿಗಳಿಗೆ ಇದು ಅವಮಾನ. ವಾಯುಪಡೆ ಸಮವಸ್ತ್ರ ಧರಿಸಿ ಕೆಲವು ಅಹಿತಕಾರಿ ಸನ್ನಿವೇಶಗಳನ್ನು ತೋರಿಸುವ ಮೂಲಕ ವಾಯುಪಡೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

Related posts

ಮೇ 12ರಂದು ದಕ್ಷಿಣ ಕನ್ನಡ, ಕೊಡಗಿನಲ್ಲಿ ಮದ್ಯ ಸಿಗಲ್ಲ

ಮಹಾಶಿವರಾತ್ರಿ ಮೆರವಣಿಗೆಯಲ್ಲಿ ವಿದ್ಯುತ್ ಸ್ಪರ್ಶ..! 14 ಮಕ್ಕಳು ಮೃತ್ಯು,ಹಲವು ಮಂದಿಗೆ ಗಂಭೀರ ಗಾಯ

ಹೇಮಂತ್ ಸಂಪಾಜೆ ಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ರಾಜ್ಯ ಪ್ರಶಸ್ತಿ ಪ್ರದಾನ