Uncategorized

ಗಾಯಕಿ ಲತಾ ಮಂಗೇಶ್ಕರ್ ಗೆ ಕೋವಿಡ್ : ಐಸಿಯುಗೆ ದಾಖಲು

ನವದೆಹಲಿ: ಗಾಯಕಿ ಲತಾ ಮಂಗೇಶ್ಕರ್ (92) ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ಕೊರೊನಾ ವೈರಸ್‌ ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಮುನ್ನೆಚ್ಚರಿಕೆಯ ಕಾರಣಗಳಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವುದು ತಿಳಿದು ಬಂದಿರುವುದಾಗಿ ಎಎನ್‌ಐ ಟ್ವೀಟಿಸಿದೆ. ‘ಲತಾ ಮಂಗೇಶ್ಕರ್ ಅವರ ವಯಸ್ಸಿನ ಕಾರಣದಿಂದಾಗಿ ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಖಾಸಗಿತನಕ್ಕೆ ಅವಕಾಶ ನೀಡಿ ಹಾಗೂ ದೀದಿಗಾಗಿ ನಿಮ್ಮ ಪ್ರಾರ್ಥನೆಗಳಿರಲಿ’ ಎಂದು ಲತಾ ಮಂಗೇಶ್ಕರ್ ಅವರ ಸೋದರ ಸೊಸೆ ರಚನಾ ಹೇಳಿದ್ದಾರೆ.

Related posts

ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜಾರನ್ನು ಗೂಂಡಾ ಎಂದ ಕರೆದ ರಾಜೇಗೌಡ..! ಸದನದೊಳಗೆ ಮಾತಿನ ಚಕಮಕಿ..!

ಗುಜರಾತ್ ಚುನಾವಣೆ ಫಲಿತಾಂಶ: ಕ್ರಿಕೆಟರ್ ಜಡೇಜಾ ಪತ್ನಿ ಸಿಕ್ಸರ್..!

ಉದ್ಯೋಗಾಸಕ್ತರಿಗೆ ಕೇಂದ್ರ ಸರಕಾರದಿಂದ ಬಿಗ್ ನ್ಯೂಸ್