ಕ್ರೈಂಬೆಂಗಳೂರು

ತಾನೇ ದುಡಿಯುತ್ತಿದ್ದ ಕಂಪೆನಿಯಿಂದ ಲ್ಯಾಪ್-ಟಾಪ್ ಕದ್ದವನಿಗಿತ್ತು ವಿಚಿತ್ರ ಕಾರಣ..! 22 ಲಕ್ಷ ಮೌಲ್ಯದ 50 ಲ್ಯಾಪ್-ಟಾಪ್ ಸೀಜ್ ಮಾಡಿದ ಪೊಲೀಸರು..!

ನ್ಯೂಸ್‌ ನಾಟೌಟ್‌: ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ತಾನೇ ದುಡಿಯುತ್ತಿದ್ದ ಕಂಪನಿಯಲ್ಲಿ ಲ್ಯಾಪ್-ಟಾಪ್ ಗಳನ್ನು ಕಳವು ಟೆಕ್ಕಿಯನ್ನು ಬಂಧಿಸಿದ್ದಾರೆ. ಟೊಮ್ಯಾಟೋ ಬೆಳೆ ನಷ್ಟವಾಗಿದ್ದಕ್ಕೆ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿದ್ದ ಎನ್ನಲಾಗಿದೆ. ಟೆಕ್ಕಿ ಸಿಸ್ಟಮ್ ಆಡ್ಮಿನ್ ಮುರುಗೇಶ ಎಂಬಾತನನ್ನು ಬಂಧಿಸಲಾಗಿದೆ.

ಹೊಸೂರಿನಲ್ಲಿ ಸಾಲ ಮಾಡಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದ ಟೆಕ್ಕಿ. ಆದರೆ ಬೆಳೆ ಕೈಕೊಟ್ಟ ಹಿನ್ನೆಲೆ ಸಾಕಷ್ಟು ನಷ್ಟವಾಗಿತ್ತು. ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಐಟಿಪಿಎಲ್ ಕಂಪನಿಯಲ್ಲಿ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ಆರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಆರೋಪಿ ಲ್ಯಾಪ್ ಟಾಪ್ ಸರ್ವಿಸ್, ರಿಪೇರಿ ಮಾಡುವ ನೆಪದಲ್ಲಿ ಸಾಕಷ್ಟು ಲ್ಯಾಪ್ ಟ್ಯಾಪ್ ಕದ್ದಿದ್ದ ಎನ್ನಲಾಗಿದೆ. ಈ ಬಗ್ಗೆ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಹಾಕಿ ಎಸ್ಕೇಪ್ ಆಗುತ್ತಿದ್ದ. ಕದ್ದ ಲ್ಯಾಪ್ ಟ್ಯಾಪ್ ಗಳನ್ನು ಹೊಸೂರಿನಲ್ಲಿ ಮಾರಾಟ ಮಾಡಿದ್ದ. ಬಂಧಿತನಿಂದ 22 ಲಕ್ಷ ಮೌಲ್ಯದ 50 ಲ್ಯಾಪ್ ಟ್ಯಾಪ್ ಸೀಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/09/vishnuvardhan-actor-birthday-kananda-news-bengaluru/
https://newsnotout.com/2024/09/ganesha-chaturti-kannada-news-nagamangala-3-students/
https://newsnotout.com/2024/09/jammu-and-kashmir-kannada-news-viral-news-vidghana-sabha-election/
https://newsnotout.com/2024/09/students-teachers-in-morarji-desai-school-girls-issue-police/

Related posts

ರಾತ್ರಿ 2-3 ಸಲ ದೈಹಿಕ ಸಂಬಂಧಕ್ಕೆ ಪತ್ನಿ ಒತ್ತಾಯಿಸುತ್ತಾಳೆ, ಹಿಂಸೆ ನೀಡುತ್ತಾಳೆ ಎಂದು ಕೋರ್ಟ್ ಮೊರೆ ಹೋದ ಪತಿ..! ಈ ಬಗ್ಗೆ ಪತ್ನಿ ಹೇಳಿದ್ದೇನು..?

ವಿದ್ಯಾರ್ಥಿನಿಯರ ವಾಶ್ ರೂಮ್‍ ನಲ್ಲಿ ಕ್ಯಾಮೆರಾ ಇಟ್ಟು 300ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳು ಮಾರಾಟ..? ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಬಂಧನ..!

ಪ್ರೇಮ ವೈಫಲ್ಯದಿಂದ ನೊಂದು ಲಾಡ್ಜ್ ​ಗೆ​​ ಹೋಗಿ ವಿಷ ಸೇವಿಸಿದ ಯುವಕ..! ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದಾಗ ಆತ ಶವವಾಗಿ ಪತ್ತೆ..!