ಕ್ರೈಂದೇಶ-ವಿದೇಶರಾಜ್ಯವೈರಲ್ ನ್ಯೂಸ್

ಭಾರೀ ಮಳೆಗೆ ಟ್ಯಾಂಕರ್ ಮೇಲೆ ಗುಡ್ಡ ಕುಸಿತ..! 7 ಮಂದಿ ಬಲಿ, ಗೂಡಂಗಡಿ ಸಮೇತ ಹಲವರು ನಾಪತ್ತೆ..!

ನ್ಯೂಸ್ ನಾಟೌಟ್: ಭಾರಿ ಮಳೆಯ ಕಾರಣ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಶಿರೂರು (Shiruru) ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 7 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಟ್ಯಾಂಕರ್‌ ಚಾಲಕ, ಕ್ಲೀನರ್‌ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಎನ್‌ಡಿ​ಆರ್​ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಂಸದರು ತಿಳಿಸಿದರು.

ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಮಂದಿ ಅಲ್ಲಿದ್ದರು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ ಟ್ಯಾಂಕರ್‌ ನಿಲ್ಲಿಸಿ ಚಹಾ ಸೇವಿಸುತ್ತಿದ್ದಾಗ ದುರಂತ ಸಂಂಭವಿಸಿದೆ. ಕುಸಿತದ ರಭಸಕ್ಕೆ ಪಕ್ಕದ ನದಿಯ ಬದಿಗೆ ಟ್ಯಾಂಕರ್ ಎಸೆಯಲ್ಪಟ್ಟಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/karnataka-milk-federation-kannada-news-curd-rate-hike-news
https://newsnotout.com/2024/07/teachers-kannada-news-viral-video-kannada-news-inside-the-school
https://newsnotout.com/2024/07/mother-and-doubter-kannada-news-mudhola-issue-police
https://newsnotout.com/2024/07/indian-army-and-terr-kannada-news-encounter-police-j-and-k

Related posts

ಕೋಟ್ಯಾಧಿಪತಿಗಳಾಗಲು ವಾಮಾಚಾರಕ್ಕೆ ಸ್ನೇಹಿತನನ್ನೇ ಶಿರಚ್ಛೇದ ಮಾಡಿದ ಕ್ರೂರಿಗಳು..! ವಾಮಾಚಾರಿಗಳು ಸೇರಿ ನಾಲ್ವರು ಅರೆಸ್ಟ್..!

ಉಪ್ಪಿಟ್ಟಿನಿಂದ ಬಯಲಾಯ್ತು ಮಗು ಕಳ್ಳಿಯ ಸುಳಿವು! ಈಕೆ ಮನೆಗೆ ಎಂಟ್ರಿ ಕೊಡುವ ರೀತಿ ಕೇಳಿದ್ರೆ ಎಂತವರೂ ಶಾಕ್ ಆಗ್ತಾರೆ!

ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಯುವಕ..! , ಅಷ್ಟ್ಕಕ್ಕೂ ಹಾವಿಗೆ ಯುವಕನ ಮೇಲೆ ಯಾಕೆ ದ್ವೇಷ..?