ದೇಶ-ಪ್ರಪಂಚ

ಮೇವು ಹಗರಣದ ಐದನೇ ಪ್ರಕರಣ: ಲಾಲು ಪ್ರಸಾದ್ ಗೆ 5 ವರ್ಷ ಜೈಲು, ₹ 60 ಲಕ್ಷ ದಂಡ

ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದ ಐದನೇ ಪ್ರಕರಣದಲ್ಲಿ (ಡೊರಂಡ ಖಜಾನೆ ಪ್ರಕರಣ) ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ, ₹60 ಲಕ್ಷ ದಂಡ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಫೆಬ್ರುವರಿ 15ರಂದು ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ಪರಿಗಣಿಸಿತ್ತು. ಶಿಕ್ಷೆಯ ಪ್ರಮಾಣವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿತ್ತು. ಈ ಪ್ರಕರಣದ ಇತರ 36ರ ಮಂದಿಗೆ ನ್ಯಾಯಾಲಯವು ಈ ಹಿಂದೆಯೇ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ಅವಿಭಜಿತ ಬಿಹಾರದಲ್ಲಿ ನಡೆದಿದ್ದ ₹950 ಕೋಟಿ ಮೊತ್ತದ ಮೇವು ಹಗರಣದಲ್ಲಿ, ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿತ್ತು. ಡೊರಂಡ ಜಿಲ್ಲಾ ಸರ್ಕಾರಿ ಖಜಾನೆಯಿಂದ ₹139 ಕೋಟಿಗಳನ್ನು ಅಕ್ರಮವಾಗಿ ಪಡೆಯಲಾಗಿತ್ತು.

Related posts

ಮನೆಯವರಿಂದಲೇ ವಧುವಿನ ಅಪಹರಣ..? ಇಲ್ಲಿದೆ ವೈರಲ್ ವಿಡಿಯೋ

ಆಕೆಯ ನಕಲಿ ಫೋಟೋ ಮತ್ತು ಮದುವೆ ಪ್ರಮಾಣಪತ್ರ ಸೃಷ್ಟಿಸಿದವರು ಪೊಲೀಸರ ಬಲೆಗೆ! ಇವರ ಖತರ್ನಾಕ್ ಪ್ಲಾನ್ ಹಿಂದಿದೆ ರೋಚಕ ಸ್ಟೋರಿ!

ಮೋದಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್..! ಮತ್ತೆ ಜಿಗಿದ ಷೇರು ಮಾರುಕಟ್ಟೆ..!