ಕರಾವಳಿ

ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಪತಿ ಮೇಲೆ ‘ಬ್ರಾ’ ಎಸೆದ ಮಹಿಳೆ..! ಗಾಳಿಯಲ್ಲಿ ತೂರಿ ಬಂದ ಒಳ ಉಡುಪನ್ನು ಕಂಡು ನಿಕ್ ಜೋನಸ್ ಮಾಡಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಾರ್ವಜನಿಕ ವೇದಿಕೆಗಳಲ್ಲಿ ತಾರೆಯರು ನೃತ್ಯ ಮಾಡುವಾಗ, ಹಾಡು ಹಾಡುವಾಗ ಅಭಿಮಾನಿಗಳು ಕೈಗೆ ಸಿಕ್ಕಿದ್ದೆನ್ನೆಲ್ಲ ವೇದಿಕೆಯತ್ತ ಎಸೆದು ಖುಷಿ ಪಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಅಭಿಮಾನಿ ಕೈಗೆ ತಕ್ಷಣ ಸಿಕ್ಕಿತೆಂದು ಖ್ಯಾತ ಗಾಯಕ ನಿಕ್ ಜೋನಸ್ ಮೇಲೆಯೇ ಸಾರ್ವಜನಿಕ ವೇದಿಕೆಯಲ್ಲಿ ಬ್ರಾ (ಒಳ ಉಡುಪನ್ನು) ಎಸೆದಿದ್ದಾಳೆ. ಈ ವೇಳೆ ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ಮುಜುಗರಕ್ಕೆ ಒಳಗಾಗಿದ್ದರೂ ಸುಧಾರಿಸಿಕೊಂಡು ಹಾಡು ಮುಂದುವರಿಸಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

ಇದಕ್ಕೆ ಬಗೆಬಗೆಯ ಕಾಮೆಂಟ್ ಗಳು ಬರುತ್ತಿವೆ. ಈ ಹಠಾತ್ ಘಟನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದರೂ ನಿಕ್ ಜೋನಸ್ ಸಂಗೀತ ಕಾರ್ಯಕ್ರಮ ಮುಂದುರಿಸಿದರು. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದ ಅಳಿಯನಾದ ಬಳಿಕ ನಿಕ್ ಜೋನಸ್ ಅವರಿಗೂ ಭಾರತದ ಜೊತೆ ನಂಟು ಬೆಳೆದಿದೆ. ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆದ ಬಳಿಕ ಅವರು ಭಾರತದ ಆಚಾರ-ವಿಚಾರಗಳನ್ನು ಪಾಲಿಸುತ್ತಿದ್ದಾರೆ. ಗಣೇಶ ಚತುರ್ಥಿ ಮೊದಲಾದ ಹಬ್ಬಗಳನ್ನು ನಿಕ್ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗಿದ್ದಾರೆ.

ವಯಸ್ಸಿನಲ್ಲಿ ನಿಕ್ ಅವರಿಗಿಂತ ಪ್ರಿಯಾಂಕಾ ದೊಡ್ಡವರು. ಇಬ್ಬರೂ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಪ್ರಿಯಾಂಕಾ ಅಲ್ಲಗಳೆದರು. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಜುಲೈನಲ್ಲಿ ಪ್ರಿಯಾಂಕಾ ಬರ್ತ್​ಡೇ ಇತ್ತು. ಪತಿ ಹಾಗೂ ಮಗಳು ಮಾಲ್ತಿ ಜೊತೆ ಇಬ್ಬರೂ ವಿದೇಶದಲ್ಲಿ ಸುತ್ತಾಟ ನಡೆಸಿ ಬಂದಿದ್ದರು.

Related posts

ಬಿರುಗಾಳಿ ಅಬ್ಬರಕ್ಕೆ ವೇದಿಕೆ ಸಮೇತ ಕುಸಿದ ಬಿದ್ದ ಮಾಜಿ ಸಚಿವ ಹಾಗೂ 15 ಮಂದಿ ಗಣ್ಯರು, ಮುಂದೇನಾಯಿತು ಗೊತ್ತಾ?

ಎಲೆಯಲ್ಲಿ ಮೂಡಿದ ಕಾಂತಾರದ ವರಾಹರೂಪಂ ಪಂಜುರ್ಲಿ ದೈವ,ಯಾವುದೇ ತರಬೇತಿಯಿಲ್ಲದೇ ಕಲಿತ ಕಲೆಗೆ ವ್ಯಾಪಕ ಮೆಚ್ಚುಗೆ

ಮಡಿಕೇರಿ: ಕಾಡು ಪ್ರಾಣಿ ಬೇಟೆಯಾಡಿದ ಪ್ರಕರಣ, ಪೆರಾಜೆಯ ವ್ಯಕ್ತಿಗೆ ಜಾಮೀನು