ಕರಾವಳಿಜೀವನಶೈಲಿಮಹಿಳೆ-ಆರೋಗ್ಯ

ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರದಾನ ಕಾರ್ಯಕ್ರಮ ಸಂಪನ್ನ, ಡಾ|ಎಸ್ ಟಿ ಶ್ರೀನಿವಾಸ್ ಮೂರ್ತಿ, ಡಾ ಕೆವಿ ಚಿದಾನಂದ ಸೇರಿದಂತೆ ಗಣ್ಯರು ಭಾಗಿ

ನ್ಯೂಸ್ ನಾಟೌಟ್ : ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರದಾನ ಸಮಾರಂಭ ಕಾಲೇಜಿನ ಸಭಾಂಗಣ ದಲ್ಲಿ ಶುಕ್ರವಾರ ( ಮೇ17) ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡೈರೆಕ್ಟೋರೇಟ್ ಆಫ್ ಮೆಡಿಕಲ್ ಎಜ್ಯುಕೇಶನ್ ಕರ್ನಾಟಕ ಸರ್ಕಾರ ಸಹಾಯಕ ನಿರ್ದೇಶಕ ಡಾ | ಎಸ್ ಟಿ ಶ್ರೀನಿವಾಸ್ ಮೂರ್ತಿ ಪಾಲ್ಗೊಂಡಿದ್ದರು. ಈ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷರಾದ ಡಾ| ಕೆ.ವಿ ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಎಒಎಲ್ಇ ಕಾರ್ಯದರ್ಶಿ ಡಾ ಐಶ್ವರ್ಯ ಕೆ.ಸಿ, ಎಒಎಲ್ ಖಜಾಂಚಿ ಡಾ. ಗೌತಮ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ | ನಿಲಾಂಬಿಕೈ ನಟರಾಜನ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ ಸಿ ಆರ್ ಭಟ್, ಪ್ರೊ ಪ್ರೇಮಾ ಬಿ.ಎನ್ ಪ್ರಾಂಶುಪಾಲರು ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷರಾದ ಡಾ| ಕೆ.ವಿ ಚಿದಾನಂದ ಅವರು, ‘ನರ್ಸಿಂಗ್ ಎಂದರೆ ರೋಗಿಗಳ ಕಾಯಿಲೆ ಗುಣಪಡಿಸುವುದು ಮಾತ್ರವಲ್ಲ ಜೀವ ಮತ್ತು ಹೃದಯಗಳ ಚಿಕಿತ್ಸೆ, ನಿಮ್ಮ ಪದವಿಯ ಬಳಿಕ ಉತ್ತಮ ಸೇವೆಯನ್ನು ಜನರಿಗೆ ನೀಡಬೇಕು. ಆಗಲೇ ನಿಮ್ಮ ವಿದ್ಯೆಗೊಂದು ಅರ್ಥ ಬರುತ್ತದೆ ಎಂದು ಕಿವಿಮಾತು ಹೇಳಿದರು.

Related posts

ಸುಳ್ಯ: ಚಲಿಸುತ್ತಿದ್ದ ಓಮಿನಿ ಕಾರು ಪಲ್ಟಿ, ಚಾಲಕನಿಗೆ ಗಾಯ

ಇಂದು ಮಧ್ಯರಾತ್ರಿಯಿಂದ ಎರಡು ದಿನ ಮದ್ಯದಂಗಡಿ, ಬಾರ್‌ ಬಂದ್‌..!, ದ.ಕ . ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಮಹತ್ವದ ಆದೇಶ

ಸುಳ್ಯದಲ್ಲಿ ಜಿ. ಕೃಷ್ಣಪ್ಪ ಕಾಂಗ್ರೆಸ್‌ ಮುನ್ನಡೆ