ಸುಳ್ಯ

KVG ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಫ್ಯಾಕಲ್ಟಿ ಡವಲಪ್ ಮೆಂಟ್’ ಕಾರ್ಯಕ್ರಮ, ಹೊಸ ಕಲಿಕಾ ವಿಧಾನದ ವಿಚಾರ ವಿನಿಮಯ

ನ್ಯೂಸ್ ನಾಟೌಟ್: KVG ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏ.18ರಂದು ‘ಫ್ಯಾಕಲ್ಟಿ ಡವಲಪ್ ಮೆಂಟ್’ ಕಾರ್ಯಕ್ರಮ ನಡೆಯಿತು.

ಕಾಲೇಜಿನ ವೈದ್ಯಕೀಯ ಶಿಕ್ಷಣ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕೇರಳದ ಕೊಟ್ಟಾಯಂನ ಸರಕಾರಿ ವೈದ್ಯಕೀಯ ಕಾಲೇಜಿನ ಫಿಸಿಯೋಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಸರಿತಾ ಜೆ ಶಣೈ (MBBS,MD(Physiology), ACME) ಭಾಗವಹಿಸಿದ್ದರು. ಸರಿತಾ ಅವರು CBME ನಲ್ಲಿ ಹೊಸ ಬೋಧನಾ ಕಲಿಕಾ ವಿಧಾನದ ಬಗ್ಗೆ ಹಲವಾರು ಮಹತ್ವದ ಮಾಹಿತಿಗಳನ್ನ ಹಂಚಿಕೊಂಡರು. ವಿವಿಧ ಬೋಧನಾ ಕಲಿಕಾ ವಿಧಾನವನ್ನು ವಿವರಿಸಿದರು. ಪರಿಣಾಮಕಾರಿಯಾಗಿರುವ ಶಿಕ್ಷಕನ ಪಾತ್ರ ಹಾಗೂ ಮತ್ತು ದಕ್ಷ ಶಿಕ್ಷಕರ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ಸುಳ್ಯ : ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ಸುಳ್ಯ :NMC,ಸಮಾಜ ಕಾರ್ಯ ವಿಭಾಗದಿಂದ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಕ್ರಮ

ಸುಳ್ಯಕ್ಕೆ ತಂಪೆರೆದ ಮಳೆರಾಯ, ಮೊದಲ ಮಳೆಯ ಸ್ಪರ್ಶ