ಕರಾವಳಿಕ್ರೀಡೆಕ್ರೀಡೆ/ಸಿನಿಮಾಶಿಕ್ಷಣಸುಳ್ಯ

ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಆತಿಥ್ಯದ ಕಬಡ್ಡಿ ಕೂಟ ಆರಂಭ, AOLE (R) ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸೇರಿದಂತೆ ಗಣ್ಯರು ಭಾಗಿ

ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಂಟಿ ಆಶ್ರಯದಲ್ಲಿ 2024-25ನೇ ಸಾಲಿನ ಬಾಲಕ-ಬಾಲಕಿಯರ ಕಬಡ್ಡಿ ಕೂಟವು ಶುಕ್ರವಾರ (ಆ.30) ಆರಂಭವಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ (AOLE (R)) ಡಾ| ಕೆ.ವಿ ಚಿದಾನಂದ ಅವರು ಕೂಟಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,’ಗ್ರಾಮೀಣ ಪ್ರತಿಭೆಗಳಿಗೆ ಮನ್ನಣೆ ನೀಡಿದ್ದು, ಪ್ರೋತ್ಸಾಹಿಸಿದ್ದು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಕೆವಿಜಿ ಸ್ಪೋರ್ಟ್ ಅಕಾಡೆಮಿ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗೌಡ ಯುವ ಸೇವಾ ಸಂಘ ಸುಳ್ಯ ಅಧ್ಯಕ್ಷ ಪಿ.ಎಸ್ ಗಂಗಾಧರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಕ್ರೀಡೆಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ಸಹಕಾರಿಯಾಗಿದೆ ಎಂದರು. ಗೌರವ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಎಮ್ ಜಿ ಎಮ್ ಹೈ ಸ್ಕೂಲ್ ಕೊಡಿಯಾಲಬೈಲ್ ಸಂಚಾಲಕ ದೊಡ್ಡಣ್ಣ ಬರೆಮೇಲು, ಕಾಲೇಜಿನ ಆಡಳಿತಧಿಕಾರಿ ಚಂದ್ರಶೇಖರ್ ಪೆರಾಲು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತಾಲೂಕು ಸ್ಪೋರ್ಟ್ಸ್ ಕೋಆರ್ಡಿನೇಟರ್ ಶಾಂತಿ ಎ.ಕೆ, ಎನ್ಎಂಪಿಯು ಪ್ರಾಂಶುಪಾಲರು ಮಿಥಾಲಿ ಪಿ ರೈ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್ ನಾಯ್ಕ್ ಭಟ್ಕಳ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಬಳಿಕ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ ಕಬಡ್ಡಿ ಆಟಗಾರ ಅಭಿಷೇಕ್ ಕೆ ಎಸ್ ಹಾಗೂ ರಾಷ್ಟ್ರೀಯ ಕಬಡ್ಡಿ ಆಟಗಾರ ನಿತಿನ್ ವಿ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ. ಎನ್ ಎಂ ಸಿ ವಿದ್ಯಾರ್ಥಿಗಳಾದ ಚಿಂತನ್ ಮತ್ತು ಬಳಗದವರು ಪ್ರಾರ್ಥಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಮಿಥಾಲಿ ಪಿ ರೈ ಸ್ವಾಗತಿಸಿದರು, ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿನಯ್ ನಿಡ್ಯಮಲೆ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ರೀಡಾ ಅಂಕಣವನ್ನು AOLE(R) ಕಾರ್ಯದರ್ಶಿ ಹೇಮಾನಾಥ್ ಕೆ ವಿ ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು.

Related posts

ಮರ್ಕಂಜ: ಜಲ್ಲಿ ತುಂಬಿದ ಲಾರಿ ತಡೆದವರ ಮೇಲೆಯೇ ಕೇಸ್ ದಾಖಲು, ಏನಿದು ವಿಚಾರ..?

ಉಪ್ಪಿನಂಗಡಿ: ಆಟೋ ರಿಕ್ಷಾಕ್ಕೆ ಟ್ಯಾಂಕರ್ ಡಿಕ್ಕಿ, ಮಗು, ಮಹಿಳೆ ಸಹಿತ ನಾಲ್ವರು ಪವಾಡಸದೃಶ ಪಾರು

ಕಾಡಾನೆಗಳಿಗೆ ಹೆದರಿ ಸ್ನಾನ ಬಿಟ್ಟು ಚಡ್ಡಿಯಲ್ಲೇ ಓಡಿದ ಯುವಕರು..!