ಕರಾವಳಿಕೊಡಗು

ಮಡಿಕೇರಿ: ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲು

ನ್ಯೂಸ್‌ ನಾಟೌಟ್‌ : ಬೇಸಿಗೆ ಆರಂಭಗೊಂಡಿದೆ. ನೀರಿಲ್ಲ ಅಂತ ಯಾವತ್ತೂ ತಾತ್ಸಾರ ಮಾಡೋದು ಸರಿಯಲ್ಲ.ನದಿಯಲ್ಲಿ ಒಳಹರಿವು ಇದ್ದಾಗ ದುರ್ಘಟನೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು.ಹೀಗಾಗಿ ಯಾವುದಕ್ಕೂ ನೀರಿನಲ್ಲಿ ಇಳಿಯುವ ಮುಂಚೆ ಎಚ್ಚರವಹಿಸುವುದು ಬಹಳ ಮುಖ್ಯ. ಅದರಲ್ಲೂ ಗೊತ್ತಿಲ್ಲದ ಜಾಗಗಳಿಗೆ ತೆರಳಿದಾಗ ಸ್ಥಳೀಯರೊಂದಿಗೆ ಆ ಜಾಗದ ಕುರಿತು ಕೇಳಿ ಮಾಹಿತಿ ತಿಳಿಯೋದು ಮುಖ್ಯ.

ಇದೀಗ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲಾದ ಘಟನೆ ಕೊಡಗು(Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದೆ.ವಿನೋದ್, ಸಚಿನ್ ಹಾಗೂ ಚಿಕ್ಕತ್ತೂರು ಗ್ರಾಮದ ಶ್ರೀನಿವಾಸ್(24) ಈಜಲು ತೆರಳಿದ್ದು, ಶ್ರೀನಿವಾಸ್ ಮೃತದೇಹ ಪತ್ತೆಯಾಗಿದೆ.

ಈ ಮೂವರು ಯುವಕರು ಮುಳ್ಳುಸೋಗೆ, ಚಿಕ್ಕತ್ತೂರು, ಹೆಬ್ಬಾಲೆ ಮೂಲದದವರು ಎಂದು ತಿಳಿದುಬಂದಿದೆ. ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿರುವ ಶಂಕೆ ಇದೆ.ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬಾರೆಯ ರ‍್ಯಾಫ್ಟಿಂಗ್‌ ಸಿಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಕಾರು ನದಿಯ ಬದಿಯಲ್ಲಿ ನಿಂತಿದೆ.

Related posts

ಸುವರ್ಣ ಸಂಭ್ರಮದ ಸನಿಹದಲ್ಲಿ ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್ & ‌ ಸಪ್ಲೈಸ್ ಸಂಸ್ಥೆ, 5 ದಶಕಗಳ ಹಾದಿಗೆ ನೆನಪುಗಳ ಸ್ಪರ್ಶ

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ..! ಕಾಲೇಜು ಬಸ್ ನಲ್ಲಿ ಬಂದ 19 ರ ಯುವತಿ ಹೋದದ್ದೆಲ್ಲಿಗೆ..?

ಕೊಡಗು: ಸರ್ಕಾರಿ ನೌಕರನ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ₹ 82 ಲಕ್ಷ ದೋಚಿದ ಆಂಟಿ..! ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ ಪೊಲೀಸರು