ಕರಾವಳಿಕೊಡಗು

ಮಡಿಕೇರಿ:ವಿವಾಹಿತನಿಗೆ ಅಕ್ರಮ ಸಂಬಂಧದಿಂದ ಮಗು ಜನನ..! ಹುಟ್ಟುತ್ತಲೇ ಕುತ್ತಿಗೆ ಹಿಸುಕಿ ಕೊಂದು ಗದ್ದೆಯಲ್ಲಿ ಹೂತಿಟ್ಟ..!ಏನಿದು ಮನಕಲಕುವ ಘಟನೆ?

ನ್ಯೂಸ್ ನಾಟೌಟ್‌:ಮೊನ್ನೆಯಷ್ಟೇ ಗದ್ದೆಯಲ್ಲಿ ಅನಾಥ ಮಗುವಿನ ಶವವನ್ನು ಹೂತಿಟ್ಟಿರುವ ಘಟನೆಯೊಂದು ಬೆಳಕಿಗೆ ಬಂದಿತ್ತು.ಅನುಮಾನಗೊಂಡ ಸ್ಥಳೀಯರು ಸ್ಥಳವನ್ನು ಪರಿಶೀಲಿಸಿದಾಗ ಅಜಾತಶಿಶುವಿನ ಮೃತ ದೇಹ ಪತ್ತೆಯಾಗಿತ್ತು.ಇದೀಗ ಅದಕ್ಕೆ ಸಂಬಂಧ ಪಟ್ಟ ಹಾಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ ಹಾಗೂ ಅಜ್ಜಿ ಕುತ್ತಿಗೆ ಹಿಸುಕಿ ಕೊಂದಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.ಈ ದಾರುಣ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ (Kushalnagar) ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ.

ತಂದೆ ಕುಮಾರ (37), ಅಜ್ಹಿ ಯಮುನಾ (57) ಕೊಲೆ ಆರೋಪಿಗಳು ಎಂದು ತಿಳಿದು ಬಂದಿದೆ. ಇಬ್ಬರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದು, ಆರೋಪಿಗಳು ಕೊಂದ ಬಳಿಕ‌ ಮೃತ ಹಸುಗೂಸನ್ನು ಗದ್ದೆಯಲ್ಲಿ ಹೂತಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಆರೋಪಿ ಕುಮಾರ್​ ಎಂಬಾತ ವಿವಾಹಿತನಾಗಿದ್ದ. ಹೀಗಿದ್ದರೂ ಕೂಡ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಹೆರಿಗೆಗೆಂದು ಕುಮಾರನ ಪತ್ನಿ ತವರಿಗೆ ತೆರಳಿದ್ದಳು.ಇದೇ‌ ಸಂದರ್ಭ ತುಂಬು ಗರ್ಭಿಣಿ ಯುವತಿಯನ್ನ ಮನೆಗೆ ಕರೆತಂದ ಕುಮಾರ್​, ಮಗು ಜನಿಸಿದ ಬಳಿಕ‌ ತಾನೇ ಸಾಕುವುದಾಗಿ ಪ್ರೇಯಸಿಗೆ ಭರವಸೆ ನೀಡಿದ್ದಾನೆ.

ಅದರಂತೆಯೇ ಕುಮಾರ್​  ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ‌ನೀಡಿದ್ದಾಳೆ. ಯಾವಾಗ ಯುವತಿ ಮನೆಯಿಂದ‌ ತೆರಳಿದಳೋ ತಕ್ಷಣ ಮಗುವಿನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.ಮಾ.10ರಂದು ಬೆಳಗ್ಗಿನ ಜಾವ ಗದ್ದೆಯಲ್ಲಿ ಮೃತ ಹಸುಗೂಸಿನ ತಂದೆ ಕುಮಾರ್​ ಹಾಗೂ ಅಜ್ಜಿ ಜಾನಕಿ ಗುಂಡಿ ತೆಗೆದಿದ್ದಾರೆ.  ಇದನ್ನ ಸ್ಥಳೀಯ ನಿವಾಸಿಗಳು ಗಮನಿಸಿ, ಶಂಕೆಯಿಂದ ಮಣ್ಣು ತೆಗೆದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Related posts

ಪೆರಿಂಜೆಯಲ್ಲಿ ರಿಕ್ಷಾ-ಕಾರು ಭೀಕರ ಅಪಘಾತ: ಐವರು ಪ್ರಯಾಣಿಕರು ಗಂಭೀರ

ಸುಳ್ಯ: ಕಾಲೇಜ್‌ಗೆ ಹೋಗಲು ಒಪ್ಪದ ಮನಸ್ಸು ,ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ..!

ಮಡಿಕೇರಿ: ಓರ್ವನ ಬಲಿ ಪಡೆದಿದ್ದ ಪುಂಡ ಕಾಡಾನೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು, 16 ವರ್ಷದ ಗಂಡು ಆನೆ ಸೆರೆ ಸಿಕ್ಕಿದ್ದು ಹೇಗೆ..?