ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ಸರಕಾರ ಘೋಷಿಸಿರುವ ಗ್ಯಾರಂಟಿಗಳ ಪೈಕಿ ಮಹಿಳೆಯರ ಉಚಿತ ಬಸ್ ಪಾಸ್ ಕೂಡ ಒಂದು. ಈ ಯೋಜನೆಯನ್ನು ಜಾರಿಗೆ ತರುವುದಕ್ಕೆ ಸಿದ್ದು ಸರಕಾರ ಎಲ್ಲ ತಯಾರಿ ನಡೆಸಿಕೊಂಡಿದೆ. ಹಾಗಿದ್ದರೆ ಉಚಿತ ಪ್ರಯಾಣಕ್ಕೆ ಏನೆಲ್ಲ ಮಾಡಬೇಕು ಅನ್ನುವುದರ ಬಗೆಗಿನ ವಿವರ ಇಲ್ಲಿದೆ ಓದಿ.
ಎಲ್ಲ ಮಹಿಳೆಯರಿಗೆ ಸರಕಾರದಿಂದ ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಅಲ್ಲಿ ತನಕ ಆಧಾರ ಕಾರ್ಡ್ , ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹವಾ ನಿಯಂತ್ರಿತ , ಐರಾವತ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಇರುವುದಿಲ್ಲ. ಅಂತಾರಾಜ್ಯ ಬಸ್‌ಗಳಲ್ಲೂ ಉಚಿತ ಪ್ರಯಾಣ ಸೌಲಭ್ಯವಿಲ್ಲ. ರಾಜ್ಯದಲ್ಲಿ ಮಾತ್ರ ಪ್ರಯಾಣದ ಭಾಗ್ಯ ಲಭಿಸಲಿದೆ. ಜೂನ್ ೧೧ರಿಂದ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಬರಲಿದೆ.