ಕ್ರೈಂರಾಜ್ಯವೈರಲ್ ನ್ಯೂಸ್

KSRTC: ಡೀಸೆಲ್ ಖಾಲಿಯಾಗಿ ಹುಲಿಕಲ್ ಘಾಟ್‌ ನಲ್ಲಿ ನಿಂತ ಸರ್ಕಾರಿ ಬಸ್..! ಟಿಕೆಟ್ ಹಣ ವಾಪಾಸ್ ಕೊಟ್ಟ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್..!

ನ್ಯೂಸ್ ನಾಟೌಟ್: ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಾರಿಗೆ ಸಚಿವರು ಈ ಹಿಂದೆ ಹೇಳಿದ್ದರು. ಈಗ ಶಿವಮೊಗ್ಗದಲ್ಲಿ ನಡೆದ ಘಟನೆ ಸಚಿವರ ಮಾತಿನ ಬಗ್ಗೆ ಅನುಮಾನ ಮೂಡುವಂತೆ ಮಾಡಿವೆ. ಕೆಎಸ್‌ಆರ್‌ಟಿಸಿ ಬಸ್ ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ ನಲ್ಲಿ ಗುರುವಾರ(ಮೇ.23) ರಂದು ನಡೆದಿದೆ.

ಇದ್ದಕ್ಕಿದ್ದಂತೆ ಬಸ್ ನಡುರಸ್ತೆಯಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿತ್ತು. ಡಿಸೇಲ್ ವ್ಯವಸ್ಥೆ ಮಾಡದ ಸಾರಿಗೆ ನಿಗಮಕ್ಕೆ ಪ್ರಯಾಣಿಕರು ಬೈಯುತ್ತಿದ್ದದ್ದು ನೋಡಿ, ಕಂಡಕ್ಟರ್ ಪ್ರಯಾಣಿಕರು ಮುಂದೆ ಪ್ರಯಾಣಿಸಲು ಟಿಕೆಟ್ ಹಣ ವಾಪಸ್ ನೀಡಲಾಯಿತು. ಬಳಿಕ ಬೇರೊಂದು ಬಸ್‌ಗಳಿಗೆ ಪ್ರಯಾಣಿಕರು ತೆರಳಿದರು. ‘ಏನು ಮಾಡೋದು ಸಾರ್, ನಮ್ಮ ಹಣದಿಂದಲೇ ಡಿಸೇಲ್ ಹಾಕಿಸಿಕೊಂಡು ಬರಬೇಕೆಂದು ಆದೇಶ ಬಂದಿದೆ’ ಎಂದು ಕಂಡಕ್ಟರ್ , ಡ್ರೈವರ್ ಹೇಳಿಕೊಂಡಿದ್ದಾರೆ.

Click 👇

https://newsnotout.com/2024/05/baby-re-birth-issue-and-darga-story
https://newsnotout.com/2024/05/rameshwaram-cafe-case-food-department-raid
https://newsnotout.com/2024/05/banshankari-devi-latters-from-devotees

Related posts

ಪ್ರವೀಣ್‌ ನೆಟ್ಟಾರು ಹತ್ಯೆಯ ಮೋಸ್ಟ್‌ ವಾಂಟೆಡ್‌ ಆರೋಪಿ ಕೊನೆಗೂ ಸೆರೆ

ಮಂಗಳೂರು: ದನ ಕಳ್ಳತನ ಪ್ರಕರಣದಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ, ಕಾರು ಮತ್ತು ಸ್ಕೂಟರ್‌ ಪೊಲೀಸ್ ವಶಕ್ಕೆ..!

76 ಶಾಲೆಗಳು ಪಾಕಿಸ್ತಾನದ ವಶಕ್ಕೆ..! ಶಾಲೆಗಳನ್ನು ಮಿಲಿಟರಿ ಪೋಸ್ಟ್‌ಗಳನ್ನಾಗಿ ಬದಲಿಸಿದ ಪಾಕ್‌ ಆರ್ಮಿ!