ಕರಾವಳಿ

ಬಸ್‌-ಲಾರಿ ಡಿಕ್ಕಿ, ತಂದೆ-ಮಗುವಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಈಚರ್ ಲಾರಿ ನಡುವೆ ಆ.27ರಂದು ಬೆಳಗ್ಗೆ  ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ಸಿನಲ್ಲಿದ್ದ ಮಗು ಹಾಗೂ ತಂದೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಮಗು ಹಾಗೂ ಮಗುವಿನ ತಂದೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಈಚರ್ ಲಾರಿಯ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಮಂಗಳೂರು: ಬಸ್ ನಿಂದ ಇಳಿದ ಶಾಲಾ ಬಾಲಕ ಅದೇ ಬಸ್ ನಡಿಗೆ ಬಿದ್ದದ್ದೇಗೆ..? ಇಲ್ಲಿದೆ ಸಿಸಿಟಿವಿ ದೃಶ್ಯ

ಸುಳ್ಯದಲ್ಲಿ ಮರಳು ಮಾಫಿಯಾ ೩ ಲಾರಿ ವಶಕ್ಕೆ ಪಡೆದ ಅಧಿಕಾರಿಗಳು

ಬಜರಂಗ ದಳ,ಆರೆಸ್ಸೆಸ್‌ ವಿಷಯಕ್ಕೆ ಕೈ ಹಾಕಿದರೆ ಕಾಂಗ್ರೆಸ್ಸೇ ಇರಲ್ಲ- ದ.ಕ. ಸಂಸದ ನಳೀನ್ ಕುಮಾರ್ ,ಜವಾಹರ ಲಾಲ್‌ ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ