ಪಡುಬಿದ್ರಿ: ಕೆಎಸ್ಆರ್ ಟಿಸಿ ಬಸ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಸಾವನ್ನಪ್ಪಿದ್ದ ಘಟನೆ ಸೆ. 8 ರ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಪಡುಬಿದ್ರಿ ಬೆಂಗ್ರೆ ನಿವಾಸಿ ಆನಂದ ದೇವಾಡಿಗ (62) ಎಂದು ಗುರುತಿಸಲಾಗಿದೆ. ಆನಂದ ದೇವಾಡಿಗ ಆವರು ಬುಧವಾರ ರಾತ್ರಿ ಪಡುಬಿದ್ರೆ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆ ಹೋಗುತ್ತಿದ್ದ ಕೆಎಸ್ ಆರ್‌ಟಿಸಿ ಬಸ್ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೂಲಿ ಕಾರ್ಮಿಕರಾಗಿದ್ದ ಆನಂದ ದೇವಾಡಿಗ ಅವಿವಾಹಿತಾಗಿದ್ದರು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.