ಕ್ರೈಂರಾಜ್ಯ

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ 30 ಜನರಿದ್ದ KSRTC ಬಸ್..! ರಸ್ತೆಯಲ್ಲಿದ್ದ ಕಾರು, ಬೈಕ್‌ ಗಳು ಜಖಂ..!

ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಹಳ್ಳಕ್ಕೆ ಬಿದ್ದ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗೇಟ್ ಬಳಿ ಶನಿವಾರ(ಜೂ.29) ನಡೆದಿದೆ. ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿಸಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಡಿವೈಡರ್ ​ಗೆ ಡಿಕ್ಕಿಯಾಗಿ ಸರ್ವಿಸ್ ರಸ್ತೆಯಲ್ಲಿದ್ದ ಕಾರು, ಬೈಕ್‌ಗಳಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ನುಗ್ಗಿದೆ. ಘಟನೆಯಲ್ಲಿ ಬಸ್‌ ನಲ್ಲಿದ್ದ 8 ಪ್ರಯಾಣಿಕರಿಗೆ ಗಾಯವಾಗಿದ್ದು, ಚಾಲಕನ ಕಾಲು ಮುರಿದಿದೆ ಎಂದು ವರದಿ ತಿಳಿಸಿದೆ.

ಗಾಯಾಳುಗಳನ್ನು ಮಂಡ್ಯ,‌ ಮೈಸೂರು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಇನ್ನೂ ಅಪಘಾತದಲ್ಲಿ 1 ಕಾರು ಹಾಗೂ 4ಕ್ಕೂ ಹೆಚ್ಚು ಬೈಕ್​​ಗಳು ಜಖಂಗೊಂಡಿದೆ. ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Click 👇

https://newsnotout.com/2024/06/uppinangady-dog-protected-women-kannada-news-uppinangady-piligudu
https://newsnotout.com/2024/06/police-viral-video-kannada-news-investigation-going-on-here-is-the-video
https://newsnotout.com/2024/06/true-love-kannada-news-marriage-matter-and-whats-app-status
https://newsnotout.com/2024/06/police-issue-kannada-news-police-are-hospitalized-and-accused-ecape
https://newsnotout.com/2024/06/ugc-net-examination-reexam-protest-issue-date-announced-and-attendence
https://newsnotout.com/2024/06/indian-army-china-boarder-kannada-news-soliders-are-nomore

Related posts

ಸುಳ್ಯ: ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಸುಬ್ರಹ್ಮಣ್ಯ: ದೇವರ ಪೂಜೆಗೆ ಬಂದ ಕಾಲೇಜು ವಿದ್ಯಾರ್ಥಿನಿಯ ಎದೆ ಮುಟ್ಟಿದ ಅಜ್ಜ..!, ವಿದ್ಯಾರ್ಥಿನಿಯಿಂದ ಪೊಲೀಸ್ ದೂರು ದಾಖಲು

ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ..! ಕೊನೆಯುಸಿರೆಳೆದ ಶಿಕ್ಷಕಿ ಬಗ್ಗೆ ಚುನಾವಣಾಧಿಕಾರಿ ಹೇಳಿದ್ದೇನು..?