ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶ್ರೀಕೃಷ್ಣ ಮಂದಿರಗಳಲ್ಲಿ ಸರಳವಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಸಲಾಗುತ್ತಿದೆ. ನಾಳೆ ಮಧ್ಯಾಹ್ನ ಶ್ರೀಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ) ನಡೆಯಲಿದೆ. ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ ಮಹಾಪೂಜೆ ನಡೆಯಲಿದೆ. ರಾತ್ರಿ ಪೂಜೆಯ ನಿವೇದನೆಗೆ ಉಂಟೆ ಕಟ್ಟುವುದಕ್ಕೆ ಸ್ವಾಮಿಜಿ ಮುಹೂರ್ತ ಮಾಡಲಿದ್ದಾರೆ. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿಯ ಮಹಾಪೂಜೆ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿಯವರು ಇತರ ಸ್ವಾಮೀಜಿಯವರೊಂದಿಗೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ನಂತರ ಕನಕನ ಕಿಂಡಿ ಎದುರು ಹಾಗೂ ವಸಂತ ಮಂಟಪದಲ್ಲಿ ಅರ್ಘ್ಯವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.