ಕರಾವಳಿ

ಹರಿತವಾದ ಕತ್ತಿಯಿಂದ ಕೋಣದ ಕತ್ತು ಕೊಯ್ದ ಕೀಚಕರು, ಹಿಂದೂ ಸಂಘಟನೆಗಳಿಂದ ಆಕ್ರೋಶ

30

ಉಳ್ಳಾಲ: ತೋಟಕ್ಕೆ ಬಂದ ಕೋಣವನ್ನು ಹರಿತವಾದ ಕತ್ತಿಯಿಂದ ಕಡಿದು ಕೊಂದ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರು ತೋಟದ ಮಾಲಿಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆನಡೆಸಿರುವುದಾಗಿ ಆರೋಪಿಸಿದ್ದಾರೆ. ಬಲ್ಯ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಸ್ಥಳದಲ್ಲಿಯೇ ಒಂದು ಸ್ಕೂಟರ್ ಪತ್ತೆಯಾಗಿದ್ದು ಆರೋಪಿಗಳು ಹತ್ಯೆ ನಡೆಸಿ ಸ್ಕೂಟರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಜಾಗದ ಮಾಲಿಕ ಜಯರಾಮ ಶೆಟ್ಟಿ ಅನ್ನುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.