ಕರಾವಳಿ

ಕಾಂತಾರಾ ಸಿನಿಮಾ ಪ್ರೇರಣೆ:ಕಾಲಿವುಡ್ ನಟ ವಿಶಾಲ್ ತುಳುನಾಡಿಗೆ ಆಗಮನ

ನ್ಯೂಸ್ ನಾಟೌಟ್ :ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧನೆ ಇದು.ನಂಬಿದವರ ಪಾಲಿಗೆ ರಕ್ಷಿಸುವ ಸಲುವಾಗಿ ಅಭಯವನ್ನು ನೀಡುವ ದೈವ ಆರಾಧನೆ ನಮ್ಮ ತುಳುನಾಡಿನ ಹಮ್ಮೆಯ ಸಂಸ್ಕೃತಿ. ಇಂತಹ ತುಳುನಾಡಿನ ಜನಪ್ರಿಯ ನಂಬಿಕೆಯ ದೈವಾರಾಧನೆ ತುಳುನಾಡಿಗೆ ಸೀಮಿತವಾಗಿತ್ತು.

ಸಿನಿಮಾ ಥೀಯೆಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಕಾಂತಾರಾ ಸಿನಿಮಾ ಇಡೀ ರಾಜ್ಯ–ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಭಾರಿ ಸಂಚಲನ ಸೃಷ್ಟಿ ಮಾಡಿತ್ತು.ಸಿನಿಮಾ ದಿಗ್ಗಜರೆಲ್ಲ ಈ ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದರು.ಇಡೀ ವಿಶ್ವವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು ಕಾಂತಾರಾ ಸಿನಿಮಾ.

ಇದೀಗ ಕಾಂತಾರಾ ಸಿನಿಮಾ ಎಫೆಕ್ಟ್ ಎಂಬಂತೆ ನಮ್ಮ ತುಳುನಾಡಿನ ದೈವಾರಾಧನೆ , ಇಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿದೆ.ಹೌದು, ತುಳುನಾಡಿನ ದೈವಾರಾಧನೆಯನ್ನು ನೇರವಾಗಿ ನೋಡಿ ಕಣ್ತುಂಬಿಕೊಳ್ಳಬೇಕೆಂದು ಮಲೆಯಾಳಂನ ಪ್ರಸಿದ್ಧ ನಟ ವಿಶಾಲ್ ಅವರು ಧರ್ಮಸ್ಥಳಕ್ಕೆ ಬರುತ್ತಿದ್ದಾರೆ.ಆದರೆ ಯಾವಾಗ ಬರುತ್ತಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

Related posts

ಮಂಗಳೂರು: 627 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು, ಸುಳ್ಯದ ಖಾಸಗಿ ಕಾಲೇಜಿನಲ್ಲಿ ಹೆಚ್ಚು ಸೋಂಕು ಪತ್ತೆ

ಪೋಷಕರೆ ಎಚ್ಚರ! ಮಂಗಳೂರಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ !

ಬಿಜೆಪಿ ನಾಯಕರ ಅಪಪ್ರಚಾರದಿಂದ ಕಾಂಗ್ರೆಸ್‌ ಸರ್ಕಾರಕ್ಕೆ ತೊಂದರೆಯಾಗಲ್ಲ: ಮಾಜಿ ಸಚಿವ ರಮಾನಾಥ ರೈ