ಭಕ್ತಿಭಾವ

ಕೊಕ್ಕಡ ಮಾಯಿಲ ಕೋಟೆ ದೈವ ಪ್ರತಿಷ್ಠಾ ಮಹೋತ್ಸವ -ನೇಮೋತ್ಸವ

690

ನ್ಯೂಸ್ ನಾಟೌಟ್: ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಹಿನ್ನೆಲೆಯಲ್ಲಿ ಇಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ಶ್ರೀಧಾಮ,ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಬೆಳಗ್ಗೆ ೯ರಿಂದ ೧೨ ಗಂಟೆಯವರೆಗೆ ಊರ ಹಾಗೂ ಪರವೂರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಬೆಳಗ್ಗೆ ೧೦ ಗಂಟೆಯಿಂದ ಕೊಕ್ಕಡ,ನಿಡ್ಲೆ,ಶಿಶಿಲ,ಹತ್ಯಡ್ಕ,ಶಿಬಾಜೆ,ಪಟ್ರಮೆ ಗ್ರಾಮಸ್ಥರಿಂದ ಹಾಗೂ ದೈವಗಳ ನೂತನ ಆಭರಣ ಮತ್ತು ಪರಿಕರಗಳ ಮೆರವಣಿಗೆ ನಡೆಯಿತು.ದೈವಸ್ಥಾನದ ಹಸಿರುಹೊರೆ ಕಾಣಿಕೆ ಕಾರ್ಯಕ್ರಮಕ್ಕೆ ಊರಿನ ‘ಗೆಳೆಯರ ಬಳಗ ಕೊಕ್ಕಡ’ ತಂಡವು 30 ಸಾವಿರ ರೂ. ಒಟ್ಟುಗೂಡಿಸಿ ಮಂಗಳೂರಿನಿಂದ ಕೇರಳ ಶೈಲಿಯ ಚೆಂಡೆ ವಾದಕರನ್ನು ಕರೆಯಿಸಿದರು. ‘ಪ್ರಣವಂ ಸಿಂಗಾರಿ ಮೇಳಂ’ ಕಲಾವಿದರು ಅತ್ಯದ್ಭುತವಾಗಿ ಸುಮಾರು ೨ ಗಂಟೆಗಳ ಕಾಲ ಚೆಂಡೆ ಬಾರಿಸಿ ಗಮನ ಸೆಳೆದರು. ಇಂದಿನಿಂದ ಮೂರು ದಿನಗಳವರೆಗೆ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ ಕೊಕ್ಕಡದ ಮಾಯಿಲ ಕೋಟೆಯಲ್ಲಿ ನಡೆಯಲಿದೆ.

See also  ಒಂದೂವರೆ ತಿಂಗಳ ಕಾಲ ನಡೆದ ವೈಭವದ ಮಹಾಕುಂಭಮೇಳಕ್ಕೆ ನಾಳೆ ಅದ್ಧೂರಿ ತೆರೆ! ಮಹಾಶಿವರಾತ್ರಿಗೆ 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget