ಕರಾವಳಿ

ಕೊಕ್ಕಡ : ಚುನಾವಣೆಯಲ್ಲಿ ಗೆಲುವಿಗಾಗಿ ಸೌತಡ್ಕ ಗಣಪತಿಗೆ ಹರಕೆ..!,ಗಂಟೆ ನೀಡಿ ಹರಕೆ ತೀರಿಸಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ..!

ನ್ಯೂಸ್ ನಾಟೌಟ್ : ವಿಧಾನಸಭೆ ಚುನಾವಣೆಯಲ್ಲಿ ಗೆದ್ರೆ ಬೆಳ್ತಂಗಡಿ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಂದು ಹರಕೆ ತೀರಿಸುತ್ತೇನೆ ಎಂದಿದ್ದ ಶಾಸಕಿಯೊಬ್ಬರು ಇದೀಗ ಹರಕೆ ಸಲ್ಲಿಸಿದ್ದಾರೆ.ಮೂಡಿಗೆರೆ ಶಾಸಕಿ‌ ನಯನ ಮೋಟಮ್ಮ ಅವರು ಚುನಾವಣೆಗೂ ಮುನ್ನ ಎಲೆಕ್ಷನ್‌ನಲ್ಲಿ ಗೆದ್ರೆ ಗಣಪತಿ ದೇವರಿಗೆ ಗಂಟೆ ನೀಡುವುದಾಗಿ ಹರಕೆ ಹೊತ್ತಿದ್ದರು.ಅದರಂತೆ ಕೊನೆಗೂ ಸೌತಡ್ಕ ಗಣಪತಿ ದೇವರ ಸನ್ನಿಧಾನಕ್ಕೆ ಬಂದು ತಮ್ಮ ಹರಕೆ ಸಲ್ಲಿಸಿದ್ದಾರೆ.ಇವರ ಜೊತೆಗೆ ಮೂಡಿಗೆರೆ ಕಾಂಗ್ರೆಸ್ ಮುಖಂಡರು ಕೂಡಾ ಹಾಜರಿದ್ದರು.

ಇದೇ ವೇಳೆ ಮಾತನಾಡಿದ ಶಾಸಕಿ ನಯನಾ ಮೋಟಮ್ಮ ಇಲ್ಲಿ ಬಂದು ತುಂಬಾ ಖುಷಿಯಾಗಿದೆ.ಇದು ಬಹಳ ಶಕ್ತಿ ಇರುವ ದೇಗುಲವೆಂದು ಕೇಳಲ್ಪಟ್ಟೆ, ಎಲೆಕ್ಷನ್‌ನಲ್ಲಿ ಗೆದ್ದು ಬಂದ್ರೆ ಪೂಜೆ ಹಾಗೂ ಗಂಟೆ ನೀಡುವುದಾಗಿ ಹರಕೆ ಹೇಳಿಕೊಂಡಿದ್ದೆವು.ಅದರಂತೆ ನಾನು ಎಲೆಕ್ಷನ್‌ನಲ್ಲಿ ವಿನ್ ಆಗಿದ್ದೇನೆ.ಇದೀಗ ನಮ್ಮೆಲ್ಲಾ ಮುಖಂಡರುಗಳ ಜತೆ ಇಲ್ಲಿ ಬಂದು ಹರಕೆಯನ್ನು ತೀರಿಸಿದ್ದೀನಿ ಎಂದರು.

Related posts

ಸುಳ್ಯ: ಮತ್ತೆ ಬೀದಿನಾಯಿಗಳ ಹಾವಳಿ,ಆತಂಕದಲ್ಲಿ ಜನ..!

ಸೂರಿಲ್ಲದೆ ಕಣ್ಣೀರಿಟ್ಟ ಸೋದರಿಗೊಂದು ಸೂರು, ಸಂಕಷ್ಟದಲ್ಲಿದ್ದ ಮಹಿಳೆಗೆ ಬೆಳಕಾದ ‘ಸೇವಾ ಭಾರತಿ’, ‘ಸೇವಾಂಜಲಿ’ ಮನೆಯ ಹಸ್ತಾಂತರ ಹೇಗಿತ್ತು..? ಇಲ್ಲಿದೆ ಡಿಟೇಲ್ಸ್

Belthangady:ಬೆಳ್ತಂಗಡಿ: ತಂದೆಯ ಎದುರಲ್ಲೇ ವಿದ್ಯುತ್ ಸ್ಪರ್ಶಿಸಿ ಮಗಳು ಸಾವು, ಪಾರ್ಸೆಲ್ ತರಲು ಓಡಿ ಬಂದ ಮಗಳಿಗೆ ಆಗಿದ್ದೇನು..?