ಕರಾವಳಿ

ಕೊಕ್ಕಡ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹಸಿಮೀನಿನ ವ್ಯಾಪಾರಿ

ನ್ಯೂಸ್ ನಾಟೌಟ್: ಹಸಿಮೀನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಶಿಬಾಜೆ ಗ್ರಾಮದ ಪೆರ್ಲ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.ವ್ಯಕ್ತಿ ಬಾವಿಕಟ್ಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೆರ್ಲ ನಿವಾಸಿ ನೋಣಯ್ಯ ಗೌಡ(ವ.55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.ಇವರು ಅಂಗವೈಫಲ್ಯ ಹೊಂದಿದ್ದ ವ್ಯಕ್ತಿಯಾಗಿದ್ದರು ಎನ್ನಲಾಗಿದೆ. ಕಳೆದ ಹಲವು ಸಮಯದಿಂದ ಶಿಬಾಜೆಯ ಪರಿಸರದಲ್ಲಿ ಹಸಿಮೀನಿನ ವ್ಯಾಪಾರ ಮಾಡಿಕೊಂಡಿದ್ದು ಅದರಲ್ಲಿಯೇ ಅವರು ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.ಮೃತರು ಪತ್ನಿ ಮಂಜುಳಾ, ಪುತ್ರರಾದ ಅಭಿಷೇಕ್, ನಿರಂಜನ್ ರನ್ನು ಅಗಲಿದ್ದಾರೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಭೀಕರ ಅಪಘಾತ: ಸಂತ್ರಸ್ತರನ್ನ ನೋಡಿ ಗಳಗಳನೇ ಅತ್ತ ಐಎಎಸ್ ಅಧಿಕಾರಿಣಿ

ಲವ್ ಜಿಹಾದ್ ಗೆ ಬಲಿಯಾಗಬೇಡಿ …. ಹಿಂದೂ ಹುಡುಗಿಯರೇ ಹುಷಾರ್‌..!

ಬಡವರ ಸೇವೆಯಿಂದ ನೆಮ್ಮದಿ : ಅಶೋಕ್‌ ರೈ