ಕರಾವಳಿಕ್ರೈಂವೈರಲ್ ನ್ಯೂಸ್

ಕೊಕ್ಕಡ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ, ಗಂಭೀರ ಗಾಯಗೊಂಡ ಸವಾರ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕು ಕೊಕ್ಕಡ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಗಂಭೀರಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ಸಂಜೆ ಕಿಶೋರ್ ಎಂಬುವವರು ಕೊಕ್ಕಡದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಡೀಕಯ್ಯ ಎಂಬುವವರು ಬೈಕ್ ಚಲಾಯಿಸಿಕೊಂಡು ಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆಂದು ನೊಜಿ ಬಾಳ್ತಿಲ ಗ್ರಾಮ ಕಡಬ ನಿವಾಸಿ ಥಾಮಸ್ ಅನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 17/2024 ಕಲಂ: 279,337 ಭಾ.ದಂ.ಸಂ ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಕ್ರಿಕೆಟ್: ನೋ ಬಾಲ್’ ಸಿಗ್ನಲ್ ಪ್ರದರ್ಶಿಸಿದ್ದಕ್ಕಾಗಿ ಅಂಪೈರ್ ನನ್ನೇ ಹತ್ಯೆಗೈದ! ಗ್ರಾಮದಲ್ಲಿ ಉದ್ವಿಗ್ನತೆ!

ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸು, ಜೂ.8ರಿಂದ 11ರ ತನಕ ‘ಆರೆಂಜ್‌ ಅಲರ್ಟ್’

ಹಠಾತ್ ಹೃದಯಾಘಾತ, ಸಂಪಾಜೆಯ ನಿವೃತ್ತ ಸೊಸೈಟಿ ಮ್ಯಾನೇಜರ್ ನಿಧನ