ಕೊಡಗುಕ್ರೈಂ

ಕೊಡಗು: ಕಾಲು ಜಾರಿ ಬಿದ್ದು ಎನ್.ಸಿ.ಸಿ ಅಧಿಕಾರಿ ಸಾವು!

ನ್ಯೂಸ್ ನಾಟೌಟ್: ವಿರಾಜಪೇಟೆ ತಾಲ್ಲೂಕಿನ ಕಡಂಗದ ಮರೂರು ಗ್ರಾಮದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಮಾರ್ಚ್ 26ರಂದು ನಡೆದಿದೆ.

ಡಾ. ಬಲ್ಯಂಡ ಬೀನಾ(52) ಎಂಬುವವರು ಮೃತ ದುರ್ದೈವಿಯಾಗಿದ್ದಾರೆ. ಇವರು ಗೋಣಿಕೊಪ್ಪಳು ಕಾವೇರಿ ಕಾಲೇಜಿನಲ್ಲಿ ಎನ್.ಸಿ.ಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಘಟನೆಯ ವಿವರ:

ಡಾ. ಬಲ್ಯಂಡ ಬೀನಾ ಅವರು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಬೀನಾ ಅವರ ತಲೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದುತ್ತು. ಈ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ. ಬೀನಾ ಅವರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related posts

ಅಶ್ಲೀಲ ವಿಡಿಯೋ ತೋರಿಸಿ ಹಾಗೆಯೇ ಮಾಡುವಂತೆ ಗಂಡನಿಂದ ಚಿತ್ರಹಿಂಸೆ..! ಪೆಟ್ರೋಲ್ ಸುರಿದುಕೊಂಡು ಮಹಿಳೆ ಆತ್ಮಹತ್ಯೆ..!

ಸಲ್ಮಾನ್ ಖಾನ್ ನನ್ನು ಕೊಲ್ಲಲು ಪಾಕ್ ನಿಂದ ಎಕೆ-47 ಖರೀದಿಗೆ ಡೀಲ್ ಮಾಡಿಕೊಂಡಿದ್ದ ಹಂತಕರು..! ಪೊಲೀಸರ ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ..!

ಅಬ್ದುಲ್ ರಜಾಕ್ ಬಾಕ್ಸ್ ನಲ್ಲಿದ್ದದ್ದು ನಾಯಿ ಮಾಂಸ ಅಲ್ಲ ಅದು ಕುರಿ ಮಾಂಸ, ಹೈದರಾಬಾದ್ ಲ್ಯಾಬ್ ವರದಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ವೀಕ್ಷಿಸಿ