ಕೊಡಗು

ಕೊಡಗಿನಲ್ಲಿ ಚಿಪ್ಸ್‌ ಗಲಾಟೆ, ದರ ಕಡಿಮೆ ಮಾಡದ್ದಕ್ಕೆ ಗೂಂಡಾಗಿರಿ, ಹಲ್ಲೆ

ನ್ಯೂಸ್ ನಾಟೌಟ್: ಗಂಡ -ಹೆಂಡತಿ ಜಗಳ ನೋಡಿದ್ದೇವೆ. ಅಣ್ಣ-ತಮ್ಮನ ನಡುವಿನ ಹೊಡೆದಾಟದ ಬಗ್ಗೆ ಕೇಳಿದ್ದೇವೆ. ಆದರೆ ಎಲ್ಲಾದರೂ ಚಿಪ್ಸ್‌ ದರ ಹೆಚ್ಚಾಯಿತೆಂದು ಹೊಡೆದಾಟ ಆಗಿರುವುದನ್ನು ತಿಳಿದಿದ್ದೀರಾ?

ಯಸ್‌…ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಚಿಪ್ಸ್ ರೇಟ್ ಕಡಿಮೆ ಮಾಡಿಲ್ಲ ಎಂದು ಬೇಕರಿ ಮಾಲೀಕನಿಗೆ ಪುರಸಭೆ ಸದಸ್ಯರೊಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಾಲೀಕ ಕಾರ್ತಿಕ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗುಂಡಾಗಿರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಬೇಕರಿ ಮಾಲೀಕ ಮೂಲತಃ ತಮಿಳುನಾಡಿನವರು , ೧೮ ವರ್ಷದಿಂದ ಕುಟುಂಬ ಸಮೇತ ವಿರಾಜಪೇಟೆಯಲ್ಲಿ ಬೇಕರಿ ಅಂಗಡಿ ನಡೆಸುತ್ತ ಜೀವನ ನಡೆಸುತ್ತಿದ್ದರು. ಎಂದು ತಿಳಿದು ಬಂದಿದೆ. ವಿರಾಜೆಪೇಟೆಯಲ್ಲಿ ತಮ್ಮವರು ಬಂದಾಗ ಚಿಪ್ಸ್ ರೇಟ್ ಕಮ್ಮಿ ಮಾಡಿಲ್ಲ ಎಂದು ಪುರಸಭೆ ಸದಸ್ಯ ಪೃಥ್ವಿನಾಥ್ ಹಾಗೂ ಆತನ ಸಹಚರ ಸನ್ನು ಕುಮಾರ್ ಇಬ್ಬರು ಬೇಕರಿಗೆ ನುಗ್ಗಿ ಗೂಂಡಾಗಿರಿ ವರ್ತನೆ ತೋರಿಸಿದ್ದಾರೆ. ಅಷ್ಷೇ ಅಲ್ಲದೆ ಅಂಗಡಿ ಲೈಸನ್ಸ್ ತೋರಿಸುವಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Related posts

ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯರಾಗಿ ಟಿ.ಶ್ಯಾಂ ಭಟ್ ನೇಮಕ,ನ್ಯಾ.ಎಲ್‌. ನಾರಾಯಣಸ್ವಾಮಿ ನೂತನ ಅಧ್ಯಕ್ಷ

ಮಡಿಕೇರಿ : ಕಾಫಿ ತೋಟಕ್ಕೆಂದು ತೆರಳಿದ್ದ ವ್ಯಕ್ತಿಗೆ ಕಾಡಾನೆ ದಾಳಿ, ಕಾಫಿ ಬೆಳೆಗಾರ ಗಂಭೀರ-ಚಿಕಿತ್ಸೆ

ಕುಶಾಲನಗರ: ಲಂಚ ಪಡೆಯುತ್ತಿದ್ದ ಎಇಇ ಲೋಕಾಯುಕ್ತ ಪೊಲೀಸ್‌ ಬಲೆಗೆ