ನ್ಯೂಸ್ ನಾಟೌಟ್ : ಕುತೂಹಲ ಕೆರಳಿಸಿದ್ದ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಗಾಧಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಅಧ್ಯಕ್ಷೆಯಾಗಿ ರಮಾದೇವಿ ಬಾಲಚಂದ್ರ ಕಳಗಿ ಹಾಗೂ ಉಪಾಧ್ಯಕ್ಷೆಯಾಗಿ ಪೂರ್ಣಿಮಾ ಬಾಲಕೃಷ್ಣ ಅರೆಕಲ್ಲು ಆಯ್ಕೆಗೊಂಡಿದ್ದಾರೆ.
ಬಿಜೆಪಿ ಭದ್ರಕೋಟೆಯಾಗಿರುವ ಕೊಡಗು ಸಂಪಾಜೆಯಲ್ಲಿ ಮತ್ತೊಮ್ಮೆ ಕಮಲ ಬೆಂಬಲಿಗ ಪಾಳಯದ ನಾಯಕರು ಗೆಲುವು ಕಂಡಿದ್ದಾರೆ. ರಮಾದೇವಿ ಬಾಲಚಂದ್ರ ಕಳಗಿ ಕಳೆದ ಹಲವು ವರ್ಷಗಳಿಂದ ಜನ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ಪತಿ ದಿವಂಗತ ಬಾಲಚಂದ್ರ ಕಳಗಿ ಅವರು ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಕೊಡಗು ಸಂಪಾಜೆಗೆ ರಾಷ್ಟ್ರಮಟ್ಟದ ಗರಿಮೆಯನ್ನು ತಂದುಕೊಟ್ಟಿದ್ದರು.