ಕರಾವಳಿ

ಮಾ19ಕ್ಕೆ ದಿವಂಗತ ಕಳಗಿ ಬಾಲಚಂದ್ರ ಸ್ಮರಣಾರ್ಥ ರಕ್ತದಾನ, ನೇತ್ರ ತಪಾಸಣಾ ಶಿಬಿರ

ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಜನರಪರ ನಾಯಕರಾಗಿ ಗುರುತಿಸಿಕೊಂಡಿದ್ದ ದಿವಂಗತ ಕಳಗಿ ಬಾಲಚಂದ್ರ ಸ್ಮರಣಾರ್ಥ ಮಾ.19ಕ್ಕೆ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಜಿಲ್ಲಾ ಪಂಚಾಯತ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆ ಮಡಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ, ಉದ್ಧವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು, ಗ್ರಾಮ ಪಂಚಾಯತ್ ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು, ಮಡಿಕೇರಿ -ಕೊಡಗು ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಶ್ರೀ ಬಾಲಚಂದ್ರ ಕಳಗಿ ಅಭಿಮಾನಿ ಬಳಗ ಸಂಪಾಜೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಸಂಪಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಸುಳ್ಯದಲ್ಲಿ ಒಂದು ದಿನದ ದಸರಾ ಆಚರಣೆಗೆ ನಿರ್ಧಾರ

ಸುಳ್ಯ: ಮತ್ತೆ ಮುಂದುವರಿದ ಚಿರತೆ ಹಾವಳಿ,ಜನವಸತಿ ಪ್ರದೇಶದಲ್ಲಿಯೇ ಬಿಂದಾಸ್ ಓಡಾಟ..!ಶರವೇಗದಲ್ಲಿ ಓಡಿ ಸಾಕು ನಾಯಿ,ದನಗಳನ್ನೂ ಬೇಟೆಯಾಡಿದ ಚೀತಾ..!

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಆಗಮಿಸಿದ ಶಿವಣ್ಣ ಜಗತ್ಪ್ರಸಿದ್ಧ ಯಾಣಕ್ಕೆ ಭೇಟಿ,29 ವರ್ಷಗಳ ನಂತರ ‘ನಮ್ಮೂರ ಮಂದಾರ ಹೂವೆ’ ಚಿತ್ರೀಕರಣ ಸ್ಥಳದಲ್ಲಿ ಹ್ಯಾಟ್ರಿಕ್ ಹೀರೋ!