ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ದಸರಾ ಈ ವರ್ಷ ಕೋವಿಡ್ ಹಿನ್ನಲೆಯಲ್ಲಿ ಒಂದೆ ದಿವಸ ನಡೆಯಲಿದೆ. ಇಂದು ಬೆಳಗ್ಗೆ ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಶಾರದೆಯ ಮೆರವಣಿಗೆ ಸುಳ್ಯ ಪೇಟೆಯಲ್ಲಿ ನಡೆದು ಶಾರದಾ ದೇವಿಯ ಪ್ರತಿಷ್ಠಾಪನೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾದ ಪೆಂಡಲ್ ನಲ್ಲಿ ನಡೆಯುವುದು. ಬಳಿಕ ಬೆಳಗ್ಗಿನಿಂದ ಭಜನೆ ನಡೆದು ಸಂಜೆ ಶ್ರೀ ದೇವಿಯ ವಿಸರ್ಜನೆ ಸುಳ್ಯ ಪಯಸ್ವಿನಿಯ ನದಿಯಲ್ಲಿ ನಡೆಯುವುದು ಎಂದು ತಿಳಿಸಲಾಗಿದೆ.