ಕೊಡಗು

ಮಡಿಕೇರಿ: 15 ವರ್ಷ ಬಾಲಕಿ ಮೇಲೆ ಯುವಕನಿಂದ ಬಲತ್ಕಾರ,ಬಾಲಕಿ ಗರ್ಭಿಣಿ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ,₹ 5 ಸಾವಿರ ದಂಡ ವಿಧಿಸಿದ ಕೋರ್ಟ್

ನ್ಯೂಸ್ ನಾಟೌಟ್ : 15 ವರ್ಷದ ಬಾಲಕಿಯ ಮೇಲೆ ಕಿರುಕುಳ ನೀಡಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ.ಬಿ.ಎಂ.ರಂಜಾನ್ ಪೂಜಾರಿ (33)ಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಆರೋಪಿ ಆಟೊ ಚಾಲಕನಾಗಿದ್ದು, ಆತ ತನ್ನ ಮನೆಯ ಸಮೀಪವಿದ್ದ ಬಾಲಕಿಯೊಬ್ಬಳ ಸ್ನೇಹ ಸಂಪಾದಿಸಿ 2020ರ ಅಕ್ಟೋಬರ್ 30ರಂದು ಆಟೊದಲ್ಲಿ ಮನೆಗೆ ಕರೆದೊಯ್ದು ಬಲತ್ಕಾರ ಮಾಡಿದ್ದ.ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಪಿ.ಪಿ.ಸೋಮೇಗೌಡ ಮತ್ತು ಎಸ್‌.ಎಸ್‌.ರವಿಕಿರಣ್ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಸಿ.ಶಾಮ್ ಪ್ರಸಾದ್ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್‌.ರುದ್ರ ಪ್ರಸನ್ನ ವಾದ ಮಂಡಿಸಿದ್ದರು.

Related posts

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಆಗಮನ ,ಕಾಂಗ್ರೆಸ್ ನಾಯಕರಿಂದ ಅದ್ದೂರಿ ಸ್ವಾಗತ

ಮಡಿಕೇರಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನಿಗಾಗಿ ನಡೆದಿತ್ತು ಹುಡುಕಾಟ

ಮಡಿಕೇರಿ: ಕಾಣೆಯಾಗಿದ್ದ ಬಾಲಕನ ಮೃತದೇಹ ಪತ್ತೆ,ಕಡಲ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ