ಕೊಡಗು

ಮಡಿಕೇರಿ:ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ಹಾಗೂ ಲಾರಿ ನಡುವೆ ಢಿಕ್ಕಿ:ಆ್ಯಂಬುಲೆನ್ಸ್‌ ಚಾಲಕನಿಗೆ ಗಾಯ! ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ನ್ಯೂಸ್‌ ನಾಟೌಟ್‌:  ಲಾರಿ ಮತ್ತು ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ ಸಂಭವಿಸಿ ಓರ್ವ ಗಾಯಗೊಂಡಿರುವ ಘಟನೆ ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತ್ತೋಡು ಎಂಬಲ್ಲಿಂದ ವರದಿಯಾಗಿದೆ.ಅಪಘಾತದಿಂದ ಗಾಯಗೊಂಡಿರುವ ಆ್ಯಂಬುಲೆನ್ಸ್‌ ಚಾಲಕನನ್ನು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶನಿವಾರ(ಇಂದು) ಬೆಳಗ್ಗೆ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಮೈಸೂರಿಗೆ ಕರೆದೊಯ್ಯುತ್ತಿದ್ದ ವೇಳೆ ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ ಮತ್ತು ಎದುರು ಭಾಗದಿಂದ ಬಂದ ಲಾರಿಗೆ ಢಿಕ್ಕಿ ಹೊಡೆಯಿತು ಎಂದು ಹೇಳಲಾಗಿದೆ.

ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲು ಲಾರಿ ಚಾಲಕ ಲಾರಿಯನ್ನು ತತ್‌ಕ್ಷಣ ಪಕ್ಕದಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ ಎಂದು ವರದಿಯಾಗಿದೆ.ಆ್ಯಂಬುಲೆನ್ಸ್‌ ಚಾಲಕ ಹೊರತುಪಡಿಸಿ ಉಳಿದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಡಿಕೇರಿ:ಕಾರು ಮತ್ತು ಈಚರ್ ವಾಹನದ ನಡುವೆ ಡಿಕ್ಕಿ,ಕಾರು ಚಾಲಕ ಸಜೀವ ದಹನ

ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರ ಪ್ರತಿಭಟನೆ

ಮಡಿಕೇರಿಯಲ್ಲಿ ಕಾಂಗ್ರೆಸ್ ಗೆ ಗೆಲುವು