ಕೊಡಗು

ಮಡಿಕೇರಿ: ಪ್ರವಾಸಿಗರ ಹಾಟ್‌ ಫೇವರಿಟ್‌ ಸ್ಥಳ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ..!ಯಾವಾಗ ಗೊತ್ತಾ?

ನ್ಯೂಸ್ ನಾಟೌಟ್ : ಮಡಿಕೇರಿಯ ರಾಜಾಸೀಟ್‌ ಅಂದ್ರೆ ತುಂಬಾ ಪ್ರವಾಸಿಗರ ಹಾಟ್ ಫೇವರಿಟ್‌ ಜಾಗ.ರಜಾ ದಿನಗಳಲ್ಲಂತು ಈ ಜಾಗದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿನ ವಾತಾವರಣ,ಇಲ್ಲಿನ ಸ್ಥಳ ಪ್ರವಾಸಿಗರಿಗೆ ತುಂಬಾ ಮುದ ನೀಡುತ್ತೆ.ಹೀಗಾಗಿ ವಿದೇಶದಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.ಇದೀಗ ರಾಜಾಸೀಟ್‌ ನ ಸೊಬಗು ಇನ್ನಷ್ಟು ಹೆಚ್ಚಾಗಲಿದೆ.ಎಲ್ಲರು ಅತಿ ಹೆಚ್ಚು ಇಷ್ಟ ಪಡುವ ಫ‌ಲಪುಷ್ಪ ಪ್ರದರ್ಶನ ಜನವರಿ 26ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ವೆಂಕಟ್‌ ರಾಜಾ ಮಾತನಾಡಿ ಈ ಮಾಹಿತಿ ನೀಡಿದ್ದಾರೆ. ಮಡಿಕೇರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ರಾಜಾಸೀಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ರಾಜಾಸೀಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ.ಉದ್ಯಾನವನದ ಕಾರಂಜಿಯನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಮತ್ತಿತರ ವಿಚಾರಗಳತ್ತ‌ ವಿಶೇಷ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

Related posts

ಕೊಡಗು ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡೆಮ್ಮೆಯನ್ನು ಗುಂಡಿಟ್ಟು ಹತ್ಯೆ!

ಮಡಿಕೇರಿ:ದ್ವಿಚಕ್ರ ವಾಹನ ಢಿಕ್ಕಿಯಾಗಿ ದುರಂತ ಅಂತ್ಯ ಕಂಡ ಸವಾರ,ಮೂರು ದಿನವಾದರೂ ಇನ್ನೂ ಪತ್ತೆಯಾಗದ ವಾರಿಸುದಾರರು..!

ಮಡಿಕೇರಿ: ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಚಿನ್ನಾಭರಣ ಕಳವು