ಕರಾವಳಿ

ಮಡಿಕೇರಿ: ಬೆಳ್ಳಿ ಚೆಂಬು ಕದ್ದ ಕಳ್ಳನ ಕಂಡು ಪೊಲೀಸ್ರೇ ಬೆಚ್ಚಿ ಬಿದ್ರು..! ಕಳಚಿ ಬಿದ್ದ ಆ ಸತ್ಯದ ಸರಪಳಿ ಯಾವುದು..?

ನ್ಯೂಸ್ ನಾಟೌಟ್ : ಹಲವು ಕಳ್ಳತನದಲ್ಲಿ ಬೇಕಾಗಿದ್ದ ಕಳ್ಳನೊಬ್ಬ ಬೆಳ್ಳಿ ಚೆಂಬು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಈತ ಪೊಲೀಸರಿಗೆ ಸಿಕ್ಕಿ ಬೀಳುತ್ತಲೇ ಹಿಂದಿನ ಎಲ್ಲ ಪ್ರಕರಣಗಳ ಬಗ್ಗೆ ಕೂಡ ಬಾಯಿ ಬಿಟ್ಟಿದ್ದಾನೆ. ಈ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಸುಂಟಿಕೊಪ್ಪ ಕೊಡಗರಹಳ್ಳಿ ಸಮೀಪ ನಡೆದಿದೆ. ಬೆಳ್ಳಿ ಚೆಂಬು, ಮೊಬೈಲ್ ಹಾಗೂ ವಾಚ್ ಅನ್ನು ಕಳವು ಮಾಡಿದ್ದ ಆರೋಪಿ ವೀರೇಶ್‌ಕುಮಾರ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ತನಿಖೆ ಕೈಗೊಂಡಾಗ ಈತನ ವಿರುದ್ಧ ಕೊಡಗು ಜಿಲ್ಲೆಯಲ್ಲಿ ಬರೋಬರಿ 9 ಕಳವು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ಈತನ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ 3, ಕುಟ್ಟ ಹಾಗೂ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ 2, ಕುಶಾಲನಗರ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ತಲಾ ಒಂದೊಂದು ಕಳವು ಪ್ರಕರಣಗಳು ದಾಖಲಾಗಿವೆ. ಆರೋಪಿಯು ಕೊಡಗರಹಳ್ಳಿ ನಿವಾಸಿ ಬಿ.ಸಿ.ತಿಮ್ಮಯ್ಯ ಅವರ ಕೂರ್ಗ್‌ಹಳ್ಳಿ ಎಸ್ಟೇಟ್‌ನಲ್ಲಿ ಜ. 7ರಂದು ಬೀಗ ಮುರಿದು ಬೀರುವಿನಲ್ಲಿದ್ದ ಬೆಳ್ಳಿ ಚೆಂಬು, ಮೊಬೈಲ್ ಹಾಗೂ ವಾಚ್ ನ್ನು ಕಳವು ಮಾಡಿದ್ದ. ಇದೇ ರೀತಿ ಪ್ರಕರಣಗಳು ಜಿಲ್ಲೆಯ ಹಲವೆಡೆ ದಾಖಲಾಗಿದ್ದುದ್ದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಸೋಮವಾರಪೇಟೆ ಉಪವಿಭಾಗದ ಡಿವೈಎಸ್ ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಸಿಪಿಐ ಕೆ.ರಾಜೇಶ್, ಸುಂಟಿಕೊಪ್ಪದ ಪಿಎಸ್ಐ ಎಂ.ಸಿ.ಶ್ರೀಧರ್ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿದೆ.

Related posts

ಸೀರೆಯುಟ್ಟು 42 ಕಿ.ಮೀ ಮ್ಯಾರಥಾನ್ ಓಡಿದ ಮಹಿಳೆ!, ದೇಶದ ಸಂಸ್ಕೃತಿ ಸಾರಿದ ಮಹಿಳೆಗೆ ನೆಟ್ಟಿಗರು ಫಿದಾ

ರಾತ್ರಿ ಹೊತ್ತು ಹೊಂಚು ಹಾಕಿ ಕನ್ನ ಹಾಕಿದ ಕಳ್ಳರು

ಮೂವರು ಕ್ರೈಸ್ತ ಧರ್ಮಗುರುಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಸುಳ್ಯದ ಚರ್ಚ್ ನಿಂದ ಪುತ್ತೂರಿಗೆ ಹೋಗುತ್ತಿದ್ದಾಗ ಘಟನೆ