Uncategorized

ಯೋಧ ಹಾಗೂ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ ಹಿಂದೂ ಸಂಘಟನೆಗಳ ಬೃಹತ್‌ ಪ್ರತಿಭಟನೆ

ಮಡಿಕೇರಿ: ಯೋಧ ಹಾಗೂ ಆತನ ಕುಟುಂಬದ ಮೇಲೆ ಎರಡು ದಿನಗಳ ಹಿಂದೆ ಕೊಡಗಿನಲ್ಲಿ ನಡೆದಿದ್ದ ಭೀಕರ ಹಲ್ಲೆಯನ್ನು ಖಂಡಿಸಿ ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ‌ ವಿವಿಧ ಹಿಂದೂ ಸಂಘಟನೆಗಳು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದವು. ಇದಕ್ಕೆ ಕೊಡವ ಸಮಾಜ ಹಾಗೂ ಗೌಡ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದವು. ಯೋಧ ಅಶೋಕ್‌ ಹಾಗೂ ಅವರ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಮತ್ತೊಂದು ಕಾರೊಂದು ಗುದ್ದಿತ್ತು. ಇದನ್ನು ಪ್ರಶ್ನಿಸಿದ್ದ ಅಶೋಕ್‌ ಹಾಗೂ ಕುಟುಂಬದ ಮೇಲೆ ಐವತ್ತಕ್ಕೂ ಹೆಚ್ಚಿನ ಅನ್ಯಕೋಮಿನ ಜನ ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡರಾದ ಕೆ.ಜಿ ಬೋಪಯ್ಯ, ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

ಚಾರ್ಮಾಡಿ: ದಿನದ 24 ಗಂಟೆ ಲಘು ವಾಹನ ಸಂಚಾರ, ಸದ್ಯಕ್ಕಿಲ್ಲ ಘನ ವಾಹನಕ್ಕೆ ಅನುಮತಿ

ಆಕಸ್ಮಿಕವಾಗಿ ಸೊಳ್ಳೆ ನಿವಾರಕ ಲಿಕ್ವಿಡ್ ಕುಡಿದ ಎರಡು ವರ್ಷದ ಕಂದಮ್ಮ,ತಾಯಿ ಸ್ನಾನಕ್ಕೆಂದು ಹೋಗಿರೋ ವೇಳೆ ದುರಂತ,ಮುಂದೇನಾಯ್ತು?

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹೇಗಿತ್ತು ಗೊತ್ತಾ?