ಕೊಡಗುಕ್ರೈಂ

ಕುಶಾಲನಗರ: ಟ್ಯಾಂಕರ್ ಮತ್ತು ಲಾರಿ ನಡುವೆ ಭೀಕರ ಅಪಘಾತ, ಎರಡೂ ಲಾರಿ ಪುಡಿ..ಪುಡಿ, ಓರ್ವ ಸಾವು

ನ್ಯೂಸ್ ನಾಟೌಟ್: ಕೊಡಗಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ ಓರ್ವ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಲಾರಿ ಮತ್ತು ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಡುವೆ ಅವಘಡ ಸಂಭವಿಸಿದೆ. ಸುಂಟಿಕೊಪ್ಪದ ಕಾರ್ಮಿಕ ರಾಜು (ರಾಜಣ್ಣ) ಎಂಬುವವರು
ತೀವ್ರವಾಗಿ ಗಾಯಗೊಂಡು ಎರಡು ಕಾಲುಗಳು ಮುರಿದ ಪರಿಣಾಮ ಜೀವ ತೆತ್ತಿದ್ದಾರೆ. ಲಾರಿ ಚಾಲಕ 7ನೇ ಹೊಸಕೋಟೆಯ ಜಬ್ಬಾರ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಿಗೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related posts

ಮಡಿಕೇರಿ: ಆಟೋ ಚಾಲಕನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಗಾಯಾಳು ಗಂಭೀರ

ದೇಶದ 9ನೇ ಶ್ರೀಮಂತನ ಪುತ್ರಿ ಆ ಒಂದು ಕಾರಣಕ್ಕೆ ಸಂಗೀತ ಕ್ಷೇತ್ರ ತೊರೆದರಾ..? ಇಲ್ಲಿದೆ ಸಂಪೂರ್ಣ ಮಾಹಿತಿ

ಮಸೀದಿ ಮೇಲೆ ಕೇಸರಿ ಧ್ವಜ..! ಹನುಮನ ದೇಗುಲದ ಮೇಲಿದ್ದ ಕೇಸರಿ ಧ್ವಜವನ್ನು ಮಸೀದಿ ಗೋಪುರದ ಮೇಲೆ ಹಾರಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ